ಬೀರಲಿಂಗೇಶ್ವರ ಹೇಳಿಕೆ ನುಡಿಗಳು

ಕಲಬುರಗಿ,ಜ.17-ತಾಲ್ಲೂಕಿನ ಸುಕ್ಷೇತ್ರ ಬಸವಪಟ್ಟಣದ ಭೀರಲಿಂಗೇಶ್ವರ ಹೇಳಿಕೆ ನುಡಿಗಳು ಇಂತಿವೆ: ” ಈ ಸಾಲನ್ಯಾಗ ತುರ್ತಾನ ತುರ್ತ ಮಿರಗಾ ಮಿಂಚಿತು. ಆರಿದ್ರಿ ಉಡಿಕಟ್ಟಿ ಪುಷ ಪುನರುಷಕ ಬಳಗುರಿಗಿ ಆಶ್ಲೆಷಿ, ಮಗಿ, ಹುಬ್ಬಿ, ಉತ್ತರಿ ಯಾರ ನಂಬಿಗಿ ಇಟ್ಟ ನಡದವನಿಗಿ ಸಿಗತಾದ ಅಂತಾನ. ಹುಬ್ಬಿ, ಉತ್ತರಿ, ಚಿತ್ತಿ, ಸ್ವಾತಿ ಕಡಿ ಮಾಡಿ ಕೊಡತಿನಿ ಅಂತಾನ. ಕೆಂಪು, ಬಿಳಿದು ತೂಕ ಮಾಡರದಾಗ ಕೆಂಪು ಮುಂದಾಯಿತು. ಎಳ್ಳ, ಹೆಸರು, ಉದ್ದ, ಎಣ್ಣಿಕಾಳ ಮುಂದಾಯಿತು ಅಂತಾನ. ಅದೆತರ ಯಾವ ನಂಬದವ, ನಂಬಿಗಿ ಇಟ್ಟ ನಡದವನಿಗಿ ಒಕ್ಕಲಿಗನ ಮಗನಿಗಿ ಯುಗಾದಿ ಹಬ್ಬಕ ದಂಡಿಗಿ ಹಚ್ಚತೀನಿ ಅಂತಾನ. ಅದಕ ಆದರನು ಈ ಸಾರಿ ಒಕ್ಕಲಿಗನ ಮಗನಿಗಿ ಬಲು ಹುಷಾರಿ ಇರು ಅಂತಾನ. ಅದಕ ಆದರನು ಒಕ್ಕಲಿಗನ ಮಗನಿಗಿ ಹಿಂದ ಇರುತಿನಿ ಅಂತಾನ”
ಸುಕ್ಷೇತ್ರ ಬಸವಪಟ್ಟಣದ ಭೀರಲಿಂಗೇಶ್ವರ ದೇವರ ಈ ಹೇಳಿಕೆ ನುಡಿಗಳನ್ನು ಮರೆಪ್ಪ ಮುತ್ಯಾ ಅವರು ನುಡಿದರು ಎಂದು ಹಣಮಂತರಾವ ಬಿ.ಮಂಗಾಣೆ ಅವರು ತಿಳಿಸಿದ್ದಾರೆ.