ಬೀಯರ ಬಾಟಲಿ ಅಕ್ರಮವಾಗಿ ಮಾರಾಟ : ಅಬಕಾರಿ ದಾಳಿ

ಯಾದಗಿರಿ : ಏ.1: ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

 ಈ ನಿಟ್ಟಿನಲ್ಲಿ 2024ರ ಮಾರ್ಚ್ 30 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ಅವರು ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಜಿಲ್ಲೆ ಯಾದಗಿರಿ ಅವರು ಮಾರ್ಗದರ್ಶನದಲ್ಲಿ ಗುರುಮಿಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನ ಅನಪೂರ ಗ್ರಾಮದಿಂದ ತೆಲಂಗಾಣ ರಾಜ್ಯದ ಜಲಾಲಪುರ ಗ್ರಾಮದ ಕಡೆಗೆ ಹೊಗುವ ಮಾರ್ಗ ಮದ್ಯದ ಅನಪೂರ ಗ್ರಾಮದಿಂದ ಅಂದಾಜು ಒಂದು ಕಿಲೋಮೀಟರ್ ದೂರದ ಅಂತರದಲ್ಲಿ ಖಚಿತ ಮಾಹಿತಿಯ ಮೇರೆಗೆ ರಸ್ತೆಗಾವಲು ಮಾಡುತ್ತಿರುವ ಸಮಯದಲ್ಲಿ ಜಲಾಲಪುರ ಗ್ರಾಮದ ಕಡೆಯಿಂದ ದ್ವಿ-ಚಕ್ರ ಹೊಂಡಾ ಶೈನ್ ವಾಹನ ಸಂ:ಖಿS 09 ಇಃ 5636 ನೇದ್ದರಲ್ಲಿ ಮಲ್ಲೆಶ ತಂದೆ ಹನುಮಂತ ಎಂಬ ಆರೋಪಿತನು ತೆಲಂಗಾಣ ರಾಜ್ಯದಲ್ಲಿ ಮಾರಾಟಕ್ಕೆ ಎಂದೂ ನಮೂದು ಇರುವ 1)  180x03 ರಾಯಲ್ ಸ್ಟ್ಯಾಗ ವಿಸ್ಕಿ. 2)180x01 ಇಂಪಿರಿಯಲ್ ಬ್ಲೂ ವಿಸ್ಕಿ. 3)180x2 ರಾಯಲ್ ಗ್ರೀನ ವಿಸ್ಕಿ. 4)650x11ಕಿಂಗಫೀಶರ ಸ್ಟ್ರಾಂಗ್ ಬೀಯರ ಬಾಟಲಿಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತನ್ನ ದ್ವಿ-ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊಂಡಾಗ ವಶಪಡಿಸಿಕೊಂಡಿದ್ದು, ಆರೋಪಿತನನ್ನು ಬಂಧಿಸಿ ಘೋರ ಪ್ರಕರಣವನ್ನು ಶ್ರೀಶೈಲ್ ಒಡೆಯರ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಯಾದಗಿರಿ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿ ಅವುಗಳ ಅಂದಾಜು ಮೌಲ್ಯ 87,990 ರೂ. ಆಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.