ಬೀಯರ್ ಬಾಟಲ್ ನಿಂದ ಪತಿ ಮೇಲೆ ಹಲ್ಲೆ

ಹುಬ್ಬಳ್ಳಿ,ಡಿ24: ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯಿಂದ ಬೇಸತ್ತು ಪತ್ನಿ ಬೀಯರ್ ಬಾಟಲಿಯಿಂದ ನಡು ರಸ್ತೆಯಲ್ಲಿಯೇ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿ ನಡೆದಿದೆ.
ವ್ಯಕ್ತಿಯ ತಲೆಗೆ ಆತನ ಪತ್ನಿ ಬಿಯರ್ ಬಾಟಲಿಯಿಂದ ಹೊಡೆದಿದ್ದು, ತೀವ್ರವಾಗಿ ಆತ ಗಾಯಗೊಂಡಿದ್ದಾನೆ. ಅಲ್ಲದೇ ರಸ್ತೆಯಲ್ಲಿಯೇ ಬಿದ್ದು ನರಳಾಡುತ್ತಿದ್ದು, ಸ್ಥಳೀಯರು ಮಹಿಳೆಯನ್ನು ತಡೆದಿದ್ದಾರೆ.
ಗಂಡ ಹೆಂಡತಿಯ ಕೌಟುಂಬಿಕ ಕಲಹದ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು, ಘಟನೆಗೆ ಸೂಕ್ತ ಕಾರಣ ಪೆÇಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ. ಇನ್ನೂ ಮಹಿಳೆಯ ಬಗ್ಗೆ ಹಾಗೂ ಹಲ್ಲೆಗೊಳಗಾದ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ 112 ಪೆÇಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.