ಬೀದಿ ಹಸುವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಗೆಳೆಯರು

ಹರಿಹರ ನ ; ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದ ಬೀದಿ ಹಸುವಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಮುಂದಾದ   ಡಾಬಾ ಜಗದೀಶ್, ಲ್ಯಾಬ್ ಟೆಕ್ನಿಷಿಯನ್ ತಜ್ಞ ಗುರುರಾಜ್ ಶಿರೋಳ್ ಗೆಳೆಯರ ಬಳಗದವರು ಮೂಕಪ್ರಾಣಿಗೆ ನೆರವು ನೀಡಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ  ಹಿಂದೆ ಬೀದಿಯಲ್ಲಿ ಮಲಗಿದ್ದ ಆಕಳ ಕರುವಿನ ಹಿಂಗಾಲಿನ ಮೇಲೆ  ವಾಹನವೊಂದು ಹಾಯ್ದು ಹೋಗಿತ್ತು. ರಭಸಕ್ಕೆ ಕಾಲಿಗೆ ಹಾನಿಯಾಗಿತ್ತು. ಗಾಯದಲ್ಲಿ ಹುಳುಬಿದ್ದು ನಿಸ್ತೇಜವಾಗಿತ್ತು. ನಿಸ್ಸಾಹಕ ಆಕಳ ಕರುವಿನ ಸ್ಥಿತಿ  ಕಂಡು ಮಮ್ಮಲ ಮರುಗಿದ ಗುರುರಾಜ್ ಶಿರೋಳ್. ಜಗದೀಶ್ ಕೂಡಲೇ ಸ್ಥಳಕ್ಕೆ ಪಶು ವೈದ್ಯರುಗಳನ್ನು ಕರೆಸಿಕೊಂಡು ಚಿಕಿತ್ಸೆ ಕೊಡಿಸಿದರು. ಹುಳುಗಳನ್ನು ಸ್ವಚ್ಛಗೊಳಿಸಿ ಬ್ಯಾಂಡೇಜ್ ಹಾಕಿ ಚುಚ್ಚು ಮದ್ದು ನೀಡಿದ ಸಹಾಯಕ ನಿರ್ದೇಶಕ ಡಾ. ಟಿ.ಕೆ ಸಿದ್ದೇಶ್. ಜಾನುವಾರುಗಳ ಅಭಿವೃದ್ಧಿ ಅಧಿಕಾರಿ ಏ.ಕೆ ಭೂಮಿಮೇಶ. ಕಾಲು ನೋವಿನಿಂದ ನರಳಾಡುತ್ತಿದ್ದ ಬೀದಿ ಹಸು ಕರುವಿಗೆ ಚಿಕಿತ್ಸೆಯನ್ನು ನೀಡಿ ಗುಣಮುಖವಾಗಲು ನೆರವಾದರು.ಕಳೆದ ಮೂರು ದಿನಗಳಿಂದ ಆಕಳ ಕರುವಿನ ಉಪಚಾರವನ್ನು ಮಾಡಿದ ಶಿವ  ಡಾಬಾ ಗೆಳೆಯರ ಬಳಗದವರಿಗೆ ಮತ್ತು ತಕ್ಷಣ ಸ್ಪಂದಿಸಿದ ಪಶು ವೈದ್ಯರು  ಮೂಕ ಪ್ರಾಣಿಗೆ ಚಿಕಿತ್ಸೆಯನ್ನು ಕೊಡಿಸಿರುವುದಕ್ಕೆ ಸ್ಥಳೀಯ ನಾಗರೀಕರು   ಶ್ಲಾಘನೀಯ  ವ್ಯಕ್ತಪಡಿಸಿದರು