ಬೀದಿ ವ್ಯಾಪಾರಿಗಳ ಸೌಹಾರ್ದ ಪತ್ತಿನ ಸಹಕಾರಿ: ನಿದೇಶಕರಿಗೆ ಪ್ರಮಾಣ ವಿತರಣೆ

ಕಲಬುರಗಿ, ಜ. 2: ಕಳೆದ 13 ವಷ9ಗಳಿಂದ ಬೀದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ನೀಡುವ ಮೂಲಕ ಅವರ ಕುಟುಂಬಗಳಿಗೆ ನೆರವು ನೀಡುತ್ತಿರುವ ಸಹಕಾರಿ ನಿಯಮಿತ ಬ್ಯಾಂಕಿನ ಅಭಿವೃದ್ಧಿ ಮತ್ತು ಪ್ರಗತಿಗೆ ನಿದೇಶಕರು ಕೈಜೋಡಿಸಬೇಕು ಎಂದು ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಜಗನ್ನಾಥ ಸೂರ್ಯವಂಶಿ ಅವರು ಮನವಿ ಮಾಡಿದರು.
ನಗರದ ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಹತ್ತಿರ ಇರುವ ಬೀದಿ ವ್ಯಾಪಾರಿಗಳ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಕಾಯಾ9ಲಾಯದಲ್ಲಿ ಅಯೋಜಿಸಿದ್ದ ಹೊಸ ವರ್ಷದ ಸ್ವಾಗತ ಮತ್ತು ನೂತನ ನಿದೇಶಕರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಸಂಘಟಿತ ವಗ9ಕ್ಕೆ ಸೇರಿದ ಬೀದಿ ಬದಿ ವ್ಯಾಪಾರಿಗಳನ್ನು ಸಂಘದ ಸದಸ್ಯರನ್ನಾಗಿಸಿ ಅವರಿಗೆ ನೆರವು ನೀಡಲು ನಿದೇಶಕರು ಮುಂದಾಗಬೇಕು ಎಂದರು.
ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಉಪಾಧ್ಯಕ್ಷ ಡಾ. ವೇದಮೂರ್ತಿ, ನೂತನ ನಿದೇಶಕರಾದ ಕಲ್ಯಾಣಕುಮಾರ, ಚಂದ್ರಹಾಸ, ಮಹೇಶ್, ರಾಮಚಂದ್ರ, ಭವಾನಿ ಸಿಂಗ್, ವೇದಮೂರ್ತಿ, ನಿಂಗರಾಜ, ಸುದೀರ, ಜಯಶಂಕರ, ಭಾಗ್ಯಶ್ರೀ, ಜ್ಯೋತಿ, ಸೈಯದ್ ಯುನೂಸ, ಬಾಬುಮಿಯಾ, ಜಗನ್ನಾಥ ಮತ್ತು ವಿನೂತ ಸೇರಿದಂತೆ ಸಿಬ್ಬಂದಿಗಳು, ಬೀದಿ ವ್ಯಾಪಾರಿಗಳು ಭಾಗವಹಿಸಿದ್ದರು.