ಬೀದಿ ವ್ಯಾಪಾರಿಗಳ ಸಹಕಾರಿ ಬ್ಯಾಂಕ: ಗಣರಾಜ್ಯೋತ್ಸವ ಆಚರಣೆ

ಕಲಬುರಗಿ: ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಹತ್ತಿರ ಇರುವ ಬೀದಿ ವ್ಯಾಪಾರಿಗಳ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕಿನಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ನೆರವೇರಿಸಿದರು.
ಸಂಘದ ಉಪಾಧ್ಯಕ್ಷ ವೇದಮೂತಿ, ಚಂದ್ರಹಾಸ ಚಿದ್ರಿ, ನಾಗೇಂದ್ರ ಸೂರ್ಯವಂಶಿ, ಮಹೇಶ ಮಾರುತಿ, ಬಾಬುಮಿಯಾ, ವೇಂಕಟೇಷ, ರಾಘವೇಂದ್ರ, ಲಕ್ಷ್ಮೀ, ಸುಮಾ, ನ್ಯಾಯವಾದಿ ಗುರುರಾಜ ತಿಳಗೋಳ, ರಾಮಚಂದ್ರ ನಾಟಿಕಾರ, ಭವಾನಿ ಸಿಂಗ ಠಾಕೂರ, ಕಲ್ಯಾಣ ರಾವ, ವೀರಣ್ಣ ಪಟ್ಟೆದಾರ, ವಿನುತ, ಸೈಯದ ಯೂಸೂಪ, ಲಿಂಗರಾಜ ಕಡೆ, ಜೈಶಂಕರ ಸೇರಿದಂತೆ ಹಲವರಿದ್ದರು.