ಬೀದಿ ವ್ಯಾಪಾರಿಗಳ ಅಂಗಡಿ-ಮುಂಗಟ್ಟು ತೆರವು

ಸೇಡಂ,ನ,04: ತಾಲೂಕಿನ ಪುರಸಭೆ ಹಾಗೂ ಸಹಾಯಕ ಆಯುಕ್ತರ ಕಚೇರಿ ಮುಂದೆ ಇರುವಂತ ಬೀದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳು ಅನೇಕ ವರ್ಷಗಳಿಂದ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಗುಡ್ಡೆ 02/11/2020 ಮೌಖಿಕವಾಗಿ ಅಂಗಡಿಯ ಮಾಲೀಕರಿಗೆ ಆದೇಶಿಸಿದರು. ಅಂಗಡಿ-ಮುಂಗಟ್ಟುಗಳು ತೆಗೆಯದೆ ಇರುವುದರಿಂದ ಇಂದು ಪೆÇಲೀಸ್ ಇಲಾಖೆಯ ಬಿಗಿಬಂದೋಬಸ್ತ್ ನೊಂದಿಗೆ ತೆರವುಗೊಳಿಸುತ್ತಿದ್ದಾರೆ. ಇಲ್ಲಿ ಒಂದು ಕುಟುಂಬ ಉಳಿದುಕೊಂಡಿರಿಗೆ ಇನ್ಫೋಸಿಸ್ ಕಾಲೋನಿಯಲ್ಲಿ ಉಳಿಯುವುದಕ್ಕೆ ತಾಲೂಕು ಆಡಳಿತ ಮಂಡಳಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸಹಾಯಕ ಆಯುಕ್ತರಾದ ರಮೇಶ್ ಎಸ್ ಕೊಲಾರ್, ತಹಸಿಲ್ದಾರ್ ಬಸವರಾಜ್ ಬೆಣ್ಣೆ ಶಿರೂರು, ಮತ್ತು ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಗುಡ್ಡೆ ತಿಳಿಸಿದ್ದಾರೆ.