ಬೀದಿ ವ್ಯಾಪಾರಿಗಳಿಗೆ 25000 ರೂ. ನೀಡಲು ಯಾಕಾಪುರ ಆಗ್ರಹ

ಚಿಂಚೋಳಿ ಮೇ 2: ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ14 ದಿನ ಲಾಕಡೌನ್ ಮಾಡಿದ್ದರಿಂದ ಚಿಂಚೋಳಿ ತಾಲೂಕಿನ ಮತ್ತು ಚಿಂಚೋಳಿ ಪಟ್ಟಣದ ಬೀದಿ ಬದಿ ವ್ಯಾಪಾರ ಮಾಡುವವರ ಆರ್ಥಿಕ ಸ್ಥಿತಿ ಕುಂಠಿತವಾಗಿದೆ. ಆದ್ದರಿಂದ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ 25 ಸಾವಿರ ಆರ್ಥಿಕ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೀದಿ ವ್ಯಾಪಾರಸ್ಥರು ಈಗಾಗಲೇ ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳನ್ನು ಯಾವೊಬ್ಬ ಅಧಿಕಾರಿಗಳು ಕೇಳಿಲ್ಲ.ಜನಪ್ರತಿನಿಧಿಗಳು ಕೂಡ ಕೇಳದೆ ಇರುವುದು ಬೀದಿ ವ್ಯಾಪಾರಿಗಳಿಗೆ ದಿಕ್ಕುತೋಚದಂತಾಗಿದೆ.ಕೂಡಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರ ಬೀದಿ ವ್ಯಾಪಾರಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಸಂಜೀವನ ಯಾಕಪೂರ್ ಅವರು ಆಗ್ರಹಿಸಿದ್ದಾರೆ