ಬೀದಿ ವ್ಯಾಪಾರಿಗಳಿಗೆ ಸಹಾಯಧನ

ಸಂಜೆವಾಣಿ ವಾರ್ತೆ

ಹಿರಿಯೂರು :ಮೇ.9- ಹಿರಿಯೂರು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಸಾಮಾಜಿಕವಾಗಿ, ಜಾತ್ಯತೀತವಾಗಿ, ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಸುರಕ್ಷತೆಗಾಗಿ ನಿರಂತರವಾಗಿ ಆರೋಗ್ಯ ಸೇವಾ ಶಿಬಿರಗಳನ್ನು ನಡೆಸುತ್ತಾ ಅನೇಕ ಸಾಮಾಜಿಕ ಸೇವೆಗಳನ್ನು ನಿಸ್ವಾರ್ಥ ಭಾವನೆಯಿಂದ ನಡೆಸುತ್ತಾ ಬಂದಿದೆ ಎಂಬುದಕ್ಕೆ ರಾಜ್ಯಪಾಲರು ಪ್ರಶಸ್ತಿ ಗೌರವಗಳನ್ನು ನೀಡಿರುವುದೇ ಸಾಕ್ಷಿಯಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್. ಸುಂದರರಾಜ್ ಹೇಳಿದರು.ನಗರದ ಗಾಂಧಿವೃತದ ಸತ್ಯಂ ಟೆಕ್ಸ್ ಟೈಲ್ಸ್ ಆವರಣದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಬೀದಿಬದಿಯಲ್ಲಿ ಕುಳಿತು  ಪ್ರತಿನಿತ್ಯ ವ್ಯಾಪಾರ-ವ್ಯವಹಾರ ಮಾಡುವ ಹತ್ತುಜನ ವ್ಯಾಪಾರಿಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡಿದರು.ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ, ಇನ್ಹರ್ ವೀಲ್ ಸಂಸ್ಥೆ ಹಾಗೂ ದಾನಿಗಳ ಸಹಕಾರದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳು, ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಿಕೊಂಡು ಬಂದಿದ್ದೇವೆ ಎಂದರು. ಈ ಕಾರ್ಯಕ್ರಮದ ನಂತರ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು,  ವಿತರಿಸಲಾಯಿತು. ಮಧ್ಯಾಹ್ನ ಆಸ್ಪತ್ರೆಗೆ ಬರುವವರಿಗೆ ಮತ್ತು ಅಲ್ಲಿನ ಒಳರೋಗಿಗಳಿಗೆ ಉಚಿತ ಉಪಹಾರ ಮತ್ತು ಮಜ್ಜಿಗೆಯನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಆರ್.ವೆಂಕಟೇಶ್, ವೈಸ್ ಚೇರ್ಮನ್ ಎ.ರಾಘವೇಂದ್ರ, ಸಣ್ಣಭೀಮಣ್ಣ, ಬಿ.ಕೆ.ನಾಗಣ್ಣ, ಟಿ.ಮಲ್ಲೇಶಪ್ಪ, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್ ಬಾಬು, ಓಂಕಾರ್, ರಾಜೇಶ್,  ಪರಮೇಶ್ವರ ಭಟ್, ತ್ರಯಂಬಕಮೂರ್ತಿ, ಶಶಿಕಲಾರವಿಶಂಕರ್, ಗೀತಾರಾಧಾಕೃಷ್ಣ, ರವಿಕುಮಾರ್, ಹೆಚ್.ವೆಂಕಟೇಶ್, ವಿಶ್ವನಾಥ್, ಎಂ.ವಿ.ಹರ್ಷ, ಕೋ ಆರ್ಡಿನೇಟರ್ ಗಳಾದ ಸಿ.ನಾರಾಯಣಾಚಾರ್,ಎಚ್.ಎಸ್.ರಾಧಾಕೃಷ್ಣ, ಅಖಿಲ ಭಾರತ ವಿಶ್ವಕರ್ಮ ಪರಿಷತ್ ನವ ದೆಹಲಿ ರಾಜ್ಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮತ್ತಿತರರು ಭಾಗವಹಿಸಿದ್ದರು