ಬೀದಿ ವ್ಯಾಪಾರಿಗಳಿಗೆ ಉಚಿತ ಮಾಸ್ಕ್ ವಿತರಣೆ

ಲಿಂಗಸುಗೂರು.ಮಾ.೩೧-ನಗರ ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರದ ರಸ್ತೆಗಳಲ್ಲಿ ಬೀದಿಯಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ಬೀದಿ ವ್ಯಾಪಾರಿಗಳ ಸಂಘದಿಂದ ವಿತರಣೆ ಮಾಡಲಾಯಿತು.
ಕೋವಿಡ್ ೧೯ ಎರಡನೇ ಹಂತದ ಮಾಹಮಾರಿ ರೋಗ ಬಂದಾಗಿನಿಂದ ವ್ಯಾಪಾರ ವೈವಾಟು ಸ್ಥಗಿತಗೊಂಡಿದೆ ಇದರಿಂದ ವ್ಯಾಪಾರಿಗಳ ಆರ್ಥಿಕವಾಗಿ ಹಿಂದುಳಿಯಲಿಕ್ಕೆ ಕೋವಿಡ್ ೧೯ ಕಾರಣವಾಗಿದೆ, ಆದರೆ ನಾವುಗಳು ಸಾರ್ವಜನಿಕ ವಲಯದಲ್ಲಿ ಸೇವೆ ಮಾಡುವ ವ್ಯಾಪಾರಿಗಳಿಗೆ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀದಿಯಲ್ಲಿ ವ್ಯಾಪಾರ ಮಾಡುವ ಜನರಿಗೆ ಕೋವಿಡ್ ನಿಂದ ರಕ್ಷಣೆ ಮಾಡಿಕೊಳ್ಳಲು ಮಾಸ್ಕ್ ಧರಿಸಿ ಜೀವ ಉಳಿಸಿ ಎಂಬ ದೇಯ ವಾಕ್ಯದೊಂದಿಗೆ ಬೀದಿ ವ್ಯಾಪಾರಿಗಳಿಗೆ ಜಾಗ್ರತಿ ಮುಗಿಸಲಾಗಿದೆ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೈಬೂಬ್‌ಪಾಶ ಹಾಗೂ ಉಪಾಧ್ಯಕ್ಷ ಜಗದೀಶ್ ಇವರು ತಿಳಿಸಿದರು.
ಕೋವಿಡ್ ೧೯ ಎರಡನೇ ಹಂತದ ಮಾಹಮಾರಿ ರೋಗವನ್ನು ನಿಯಂತ್ರಿಸಲು ಎಷ್ಟು ಸಾಧ್ಯವೋ ಅಷ್ಟು ಮಾಡಲು ನಾವೆಲ್ಲರೂ ಮುಂದಾಗೊಣ ಸರ್ಕಾರದ ನಿಯಮ ಪ್ರಕಾರ ಪ್ರತಿಯೊಂದು ಹಂತದಲ್ಲೂ ಬೀದಿ ವ್ಯಾಪಾರಿಗಳು ಸರ್ಕಾರದೊಂದಿಗೆ ಕೈ ಜೋಡಿಸಿ ಸ್ಥಳೀಯ ಸಂಘಸಂಸ್ಥೆಗಳು ಅಧಿಕಾರಿಗಳಿಗೆ ಸಾಥ್ ನೀಡಿ ಲಿಂಗಸುಗೂರು ತಾಲೂಕನ್ನು ಕರೋನಾ ೧೯ ಎರಡನೇ ಹಂತದ ಮಾಹಮಾರಿ ರೋಗ ಮುಕ್ತ
ತಾಲೂಕನ್ನು ಮಾಡಲು ಪ್ರಯತ್ನಿಸೊಣ, ಎಂದು ಈ ಮುಲಕ ಸಾರ್ವಜನಿಕ ವಲಯದಲ್ಲಿ ಜಾಗ್ರತಿ ಮುಡಿಸಲಾಗಿದೆ.
ಬೀದಿ ವ್ಯಾಪಾರಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಹಾಗೆ ನಿಮ್ಮವರನ್ನೂ ಕರೆ ತನ್ನಿ ನಾಳೆ ಏಪ್ರಿಲ್ ೦೧ರಿಂದ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರು ೪೫ ವರ್ಷದರಿಗೆ ಉಚಿತವಾಗಿ ಲಸಿಕೆ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರೂ ಬೀದಿ ವ್ಯಾಪಾರಿಗಳು ಕೋವಿಡ್ ೧೯ ಲಸಿಕೆ ಹಾಕಿಸಿ ನಿಮ್ಮ ಸುಂದರವಾದ ಭವಿಶ್ಯ
ರೂಪಿಸಿಕೊಳ್ಳಿ ಮೈಬೂಬಪಾಶ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಗದಿಶ್, ಹನುಮಂತಪ್ಪ, ಹುಲುಗಪ್ಪ, ಶರಣಪ್ಪ ಸೇರಿದಂತೆ ಇತರರು ಜಾಗ್ರೂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.