
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ27: ಬಿಜೆಪಿ ನಾಯಕಿ ರಾಣಿ ಸಂಯುಕ್ತ ಹೊಸಪೇಟೆಯ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಸ್ಥಳದಲ್ಲಿ ಛತ್ರಿಗಳನ್ನು ವಿತರಿಸುವ ಮೂಲಕ ಆಸರೆಯಾಗಿದ್ದಾರೆ.
ಭಾನುವಾರ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಚೆರ್ಚೆ ನಡೆಸಿದ ಅವರು ಹೊಸಪೇಟೆಯ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ಆರಂಭವಾದ ಬಿಸಿಲಿನ ಬೇಗೆಯಲ್ಲಿ ಬೆಂದು ಹೋಗಬಾರದು ಎಂದು ತಮ್ಮ ಬೀದಿ ಬಂದಿಯ ಬಂಡಿ ಹಾಗೂ ಪುಟ್ಟಿಗಳು ಸೇರಿದಂತೆ ವ್ಯಾಪಾರ ಸ್ಥಳಕ್ಕೆ ನೆರಳು ನೀಡುವ ಛತ್ರಿಗಳನ್ನು ನೀಡುವ ಮೂಲಕ ಬಿಸಿಲು ಸಹಿಸುವ ಒಂದು ಸಣ್ಣ ಸಹಕಾರ ವಿತರಿಸಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯ ಸದಸ್ಯ ಆಗಿರುವ ರಾಣಿ ಸಂಯುಕ್ತರವರ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿದ ಛತ್ರಿಗಳನ್ನು ರಾಜವರ್ಧನರೆಡ್ಡಿ, ವೀರಾಂಜನಯ್ಯ, ಅನಂತಸ್ವಾಮಿ, ಜಂಬಾನಹಳ್ಳಿ ವಸಂತ, ಕಟಗಿ ರಾಮಕೃಷ್ಣ, ಚಂದ್ರಕಾಂತ ಕಾಮತ, ಗೋವಿಂದರಾಜ್ ಛತ್ರಿಗಳನ್ನು ವಿತರಿಸಿದರು.