ವಿಜಯಪುರ :ಜೂ.18: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ನೇಮಕಗೊಳಸಿ ಜಿಲ್ಲಾಧ್ಯಕ್ಷ ಲಾಲಸಾಬ ಕೊರಬು ಮಾತನಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಕಟ್ಟಡ ಬೇಕಿಲ್ಲ ಕರೆಂಟ್ ಬಿಲ್, ಜಿಎಸ್‍ಟಿ ಯಾವ ಕಾಟವೂ ಇಲ್ಲ ಎಂದುಕೊಳ್ಳುವವರೇ ಹೆಚ್ಚು . ಆದರೆ ಜೀವನೋಪಾಯಕ್ಕಾಗಿ ಬೀದಿ ಬದಿಯಲ್ಲಿ ಸೊಪ್ಪು , ತರಕಾರಿ , ಹಣ್ಣು, ತಿಂಡಿ ಮಾರಿ ಬದುಕುವವರ ಬದುಕು ದೂರಕ್ಕೆ ಇಳಿದಿಲ್ಲ. ಆರಕ್ಕೆ ಏರಿಲ್ಲ ಎಂಬಂತಾಗಿದೆ ತಲೆಮಾರುಗಳಿಂದಲೂ ಇದೇ ವೃತ್ತಿ ಮಾಡಿಕೊಂಡಿದ್ದರೂ ಸ್ವಂತ ಸೂರಿಲ್ಲ. ಸಾಲ ಮುಗಿದಿಲ್ಲ , ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ , ಬದುಕಿನ ಬಂಡಿ ನಿಂತಲ್ಲೇ ಇದೆ. ಇನ್ನು ದಿನನಿತ್ಯದ ವ್ಯಾಪಾರ ಮಾಡುವ ಜಾಗದಲ್ಲಿ ಎದುರಿಸುವ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ. ಬೇರೆ ಅಂಗಡಿಗಳ ಮುಂದೆ ಕೂತರೆ ಅವರು ಕಿರಿಕಿರಿ ಮಾಡುತ್ತಾರೆ. ಆದ್ದರಿಂದ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ 2014 ಕಾಯ್ದೆ ಅಡಿಯಲ್ಲಿ ಕಾಂಗ್ರೆಸ್ ಸರಕಾರವು ಈ ವಿಭಾಗವನ್ನು ಮಾಡಿದ್ದು, ಈ ವಿಭಾಗದಲ್ಲಿ ಸದಸ್ಯರಾದ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಇಬ್ರಾಹಿಂ ತಂ. ಅಬ್ದುಲಲತೀಫ ಮುಜಾವರ ಇವರನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ವಿಜಯಪುರ ಜಿಲ್ಲಾ ಕಾರ್ಯದರ್ಶಿಯಾಗಿ, ಶ್ರೀಮತಿ ಲಕ್ಷ್ಮೀ ಗಂ. ಸುರೇಶ ಶಿವುಗೋಳ ಇವರನ್ನು ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ (ಮಹಿಳಾ ಘಟಕ) ಬುರಾನಸಾಬ ತಂ. ಅಬುಬಕರ ಮಲಬಾರಿ ಇವರನ್ನು ವಿಜಯಪುರ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ, ಖ್ವಾಜಾ ಗರೀಬನವಾಜ ತಂ. ಉಸ್ಮಾನಸಾಬ ಅತ್ತಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲಸತ್ತಾರ ತಂ. ಹುಸೇನಸಾಬ ಬಾಗವಾನ ಇವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಈರಪ್ಪ ತಂ. ಶಂಕರಪ್ಪ ಚಟ್ಟೇರ ಇವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.