ಬೀದಿ ಬದಿ ವ್ಯಾಪಾರಿಗಳ ತೆರವಿಗೆ ವಿರೋಧಿಸಿ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.24: ಕರ್ನಾಟಕ ರಾಜ್ಯ ರಸ್ತೆ ಬೀದಿ ಬದಿ ವ್ಯಾಪಾರಿಗಳ ಮಹಾ ಮಂಡಳದಿಂದ ನಗರದಲ್ಲಿ ಪಾಲಿಕೆಯವರು ನಿಗಧಿ‌ಪಡಿಸಿದ ಸ್ಥಳ‌ಬಿಟ್ಟು ಎಲ್ಲಂದರಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವುದನ್ನು  ತೆರವುಗೊಳಿಸಬೇಕೆಂಬ ತೀರ್ಮಾನ ಕೈಬಿಡಬೇಕೆಂದು‌ ನಗರದಲ್ಲಿಂದು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ನಗರದ ರಾಘವ ಕಲಾಮಂದಿರದ ಬಳಿಯಿಂದ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು.
ಮಹಿಳೆಯರಿಗೆ ಪ್ರತ್ಯೇಕ ವೆಂಡಿಂಗ್ ಜೋನ್ ತೆರೆಯಬೇಕು. ಎಸ್ಸಿ.ಎಸ್ಟಿಗಳಿಗೂ ಪ್ರತ್ಯೇಕ ವೆಂಡಿಂಗ್ ಜೋಬ್ ರಚನೆ, ಸ್ವ ಸಹಾಯ ಗುಂಪುಗಳ ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು ಸೇರಿದಂತೆ ಹಲವು‌ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು‌
ಬೀದಿ ಬದಿ ಮಾರಾಟಕ್ಕೆ ಆಹಾರ, ಹಣ್ಣು, ತರಕಾರಿ ಮತ್ತಿತರೇ ವಲಯಗಳನ್ನು ಮಾಡಿ ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.
ಅಧ್ಯಕ್ಷ ಡಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ವಿಶ್ವನಾಥ ಸ್ವಾಮಿ,  ವೆಂಕಟೇಶ್, ಲೋಕೇಶ್, ಇಸ್ಮಯಿಲ್, ಅಂಜಿನಮ್ಮ, ಧನ ಲಕ್ಷ್ಮಿ,ಶ್ರೀ ವಾಸಲು, ಮಸ್ತಾನಮ್ಮ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು