ಬೀದಿ ಬದಿ ವ್ಯಾಪಾರಿಗಳಿಗೆ ವಚನ ಚಾರಿಟೇಬಲ ಸೋಸೈಟಿ ವತಿಯಿಂದ ಕೊಡೆ ವಿತರಣೆ

ಬೀದರ:ಎ.17:ವಚನ ಚಾರಿಟೇಬಲಸ್ ಸೋಸೈಟಿ ವತಿಯಿಂದ ನಗರದ ಹಲವಾರು ಬೀದಿ ಬದಿ ಪಾದುಕೆ ಕರ್ಮಚಾರಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಬೃಹತ್ ಗಾತ್ರದ ಕೊಡೆಗಳನ್ನು ಭಾನುವಾರ ವಿತರಿಸಲಾಯಿತು.

ಗುಂಪಾ ರಿಂಗ್ ರಸ್ತೆ, ಕುಂಬಾರ ವಾಡಾ, ಗಾಂಧಿ ಗಂಜ, ಕೇಂದ್ರಿಯ ವಿದ್ಯಾಲಯ, ಬಸ್ ನಿಲ್ದಾಣ, ಮಡಿವಾಳ ವೃತ್ತ, ಕನ್ನಾಡಂಬೆ ವೃತ, ಹಾಗೂ ಅಂಬೇಡ್ಕರ ವೃತ ಸೇರಿದಂತೆ ವಿವಿಧಡೆ ಕೊಡೆಗಳನ್ನು ವಿತರಿಸಲಾಯಿತು.

ಸೋಸೈಟಿ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನಾವದಗೆರೆ ಮಾತನಾಡಿ, ರಸ್ತೆ ಬದಿಯಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ತಾಪದಿಂದ ಬಳಲುತ್ತಿರುವ ಹಣ್ಣು, ಕಾಯಿಪಲ್ಯೆ ಮಾರಾಟ ಹಾಗೂ ಇತರೆ ಬಡ ವ್ಯಾಪಾರಸ್ಥರ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಉದ್ದೆಶದಿಂದ ಈ ಬೃಹತ್ ಗಾತ್ರದ ಕೊಡೆಗಳನ್ನು ಹಂಚಲಾಗಿದೆ. ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಅವರಿಗೆ ಇದು ಸಹಕಾರಿಯಾಗಲಿದೆ ಎಂದರು. ಇನ್ನು

ಗೋಕಾಕನ ಸತ್ಯಮೇಧಾ ತಾಯಿ ಮಾತನಾಡಿ, ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಳವಾಗುತ್ತಿದ್ದು, ಕಳೆದ ಹಲವು ದಿನಗಳಿಂದ ಬಡ ವ್ಯಾಪಾರಸ್ಥರು ಅದರಿಂದ ರಕ್ಷಿಸಿಕೊಳ್ಳಲು ಪರದಾಡುತ್ತಿರುವುದನ್ನು ಮನಗಂಡು ಅವರಿಗೆ ನೆರಳು ಒದಗಿಸುವ ಉದ್ದೆಶದಿಂದ ಈ 50ಕ್ಕು ಹೆಚ್ಚು ಕೊಡೆಗಳನ್ನು ವಚನ ಚಾರಿಟೇಬಲ್ ಸೋಸೈಟಿಯಿಂದ ವಿತರಿಸಿರುವುದು ಶ್ಞಾಘನಿಯ ಕಾರ್ಯ ಎಂದರು.

ಈ ಸಂದರ್ಬದಲ್ಲಿ ಸೋಸೈಟಿ ನಿರ್ದೇಶಕರಾದ ಶಿವಕುಮಾರ ಸಾಲಿ, ಅಲ್ಲಮಪ್ರಭು ನಾವದಗೆರೆ ಮಲ್ಲಿಕಾರ್ಜುನ್ ನಿಂಗದಳ್ಳಿ, ಪ್ರಕಾಶ್ ಗಂದಿಗುಡೆ, ಜಗನ್ನಾಥ್ ಶಿವಯೋಗಿ, ಪ್ರಶಾಂತ್ ಸುಪೆಕರ್, ವೈಜನಾಥ್ ಸಜ್ಜನಷೆಟ್ಟಿ, ಅಲ್ಲಮಪ್ರಭು ಯಲಮಡಗಿ ಹಾಗೂ ಸದಸ್ಯರು ಇದ್ದರು.