ಬೀದಿ ಬದಿ ವ್ಯಾಪಾರಿಗಳಿಗೆ ಬಜೆಟ್‍ನಲ್ಲಿ 20 ಕೋಟಿ ಅನುದಾನ ಮೀಸಲು: ರಂಗಸ್ವಾಮಿ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.6:ಕೇಂದ್ರದಲ್ಲಿ ಡಾ.ಮನಮೋಹನ ಸಿಂಗ್‍ರವರು ಪ್ರಧಾನಿಯಾಗಿದ್ದಾಗ ಬೀದಿಬದಿ ವ್ಯಾಪಾರಿಗಳ ಭದ್ರತೆಗೆ ಕಾನೂನನ್ನು ರೂಪಿಸಿದ್ದಾರೆ. ಅದರಂತೆ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಚಿಕ್ಕಮಳಿಗೆಗಳನ್ನು, ತಳ್ಳು ಗಾಡಿಗಳನ್ನು ನೀಡಲು ರೂ.20 ಕೋಟಿ ಅನುದಾನವನ್ನು ಕಾಯ್ದಿರಿಸಿದ್ದಾರೆ ಎಂದು ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಡಾ.ಸಿ.ಇ. ರಂಗಸ್ವಾಮಿ ಹೇಳಿದರು.
ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಿಭಾಗದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯಪುರ ಮಹಾನಗರಪಾಲಿಕೆಯಲ್ಲಿ ರೂ.1 ಕೋಟಿ ಅನುದಾನ ಮೀಸಲಿಡಲಾಗಿದೆ. ಇದರ ಸದುಪಯೋಗವನ್ನು ಬೀದಿಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವಿಗೆ ತಮ್ಮ ಬಳಿ ಬರುವ ಗ್ರಾಹಕರ ಮನವೊಲಿಸಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಮಣಿಗೌಡ, ಜಿಲ್ಲಾ ಅಧ್ಯಕ್ಷ ಲಾಲಸಾಬ ಕೊರಬು, ಓಬಿಸಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ಕಾಲೇಬಾಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಅಬ್ದುಲ್ ಸತ್ತಾರ ಬಾಗವಾನ, ಮೈಬೂಬ ವಾಟಿ, ರಮಜಾನ ಶೇಖ, ಅನೀಲ ಚವ್ಹಾಣ, ಮೈಬೂಬ ಜಾಗಿರದಾರ, ಜುಮ್ಮಣ್ಣ ತಾಳಿಕೋಟಿ, ಚಾಂದಸಾಬ ದೇಸಾಯಿ, ಶರಣಮ್ಮ ನಾಯಕ, ಸಿದ್ದು ಹಡಪದ, ವಿದ್ಯಾಶ್ರೀ, ಭಾಗ್ಯಶ್ರೀ, ಜಯರಾಬಿ ಚೌಧರಿ, ಎಂ.ಎಂ. ಮುಲ್ಲಾ, ಫಿರೋಜ ಶೇಖ, ಸೋಮಣ್ಣ ತಳವಾರ, ಕೃಷ್ಣಾ ಲಮಾಣಿ, ಸಂತೋಷ ಬಾಲಗಾಂವಿ, ಮಹಾದೇವ ಜಾಧವ, ಎ.ಆರ್. ಕಂಬಾಗಿ, ಜಯಪ್ರಭು ಕೊಳಮಲಿ, ಭೀಮರಾಯ ಸೀತಿಮನಿ, ಮಹಾಲಿಂಗ ಕೆಂಗಲಗುತ್ತಿ, ರಮೇಶ ಪೂಜಾರಿ, ಶಾಂತವ್ವ ಹೊಸಮನಿ, ಅಬ್ದುಲ್‍ಪೀರಾ ಜಮಖಂಡಿ, ಬಸಪ್ಪ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.