ಬೀದಿ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ

ಕಲಬುರಗಿ:ಎ.4: ನಗರದ ಉತ್ತರ ಮತಕ್ಷೇತ್ರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಕೆಎಂಎಫ್ ಹಾಲಿನ ಡೈರಿ ಎದುರಿಗೆ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರಿಗೆ ಚಂದು ಪಾಟೀಲ್ ಅಭಿಮಾನಿ ಬಳದಿಂದ ಕೊಡೆ ವಿತರಿಸಲಾಯಿತು.
ಬಿಸಿಲ ಬೇಗೆಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಹವಣಿಸುತ್ತಿರುವವರಿಗೆ ಕೊಡೆ ವಿತರಿಸುವ ಮೂಲಕ ಬೀದಿ ಬದಿಯ ವ್ಯಾಪಾರಸ್ಥರಿಗೆ ಬಿಸಿಲಿನ ಬವಣೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಚಂದು ಪಾಟೀಲ್ ಅವರು ಕೊಡೆ ನೀಡುವ ಮೂಲಕ ಅವರಿಗೆ ನೆರಳಾದರು.
ಬಿ.ಜೆ.ಪಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ್, ಅಶೋಕ ಮಾನಕರ್, ಸಂಗು ಮನ್ನಳ್ಳಿ, ಚನ್ನವೀರ್ ಲಿಂಗನವಾಡಿ, ಬಿ ಸಿಂಗ್, ವಿಜು ಮನ್ನಳ್ಳಿ, ಶಾಂತು ಖೇಮಜಿ, ಶಿವಲಿಂಗ್ ಹಳಿಮನಿ, ಕೃಷ್ಣನಾಯಕ್, ವಿಜಯ ಮಡಿವಾಳ, ವಿಕಾಸ್ ಕಾರ್ಣಿಕ್, ದಿಗಂಬರ್ ಮಗನಗಿರಿ, ಸಂತೋಷ್ ಹುಡುಗಿ, ಅಬ್ದುಲ್ ರಬ್, ರಮೇಶ್ ಬೆಳಕೇರಿ, ಸವಿತಾ ಪಾಟೀಲ್, ರಾಜಶ್ರೀ ಮೇತ್ರೆ, ಸಿಧಂಮಾ ಶೀಲವಂತ್ , ಮೀನಾಕ್ಷಿ, ಜಯಶ್ರೀ, ಕವಿತಾ, ಅಂಬ್ರೆಶ್ ಭೊವಿ, ಚನ್ನು ಭಂಗೆ, ರವೀಂದ್ರ ಗುತ್ತೇದಾರ್, ತುಕರಾಮ ರಾಂಪುರೆ, ಜಾವೀದ್ ಪಟೇಲ್, ಅಮರ ಸಿಂಗ್ ಠಾಕೂರ್, ಜಾಗೇಶ್ವರ್ ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.