ಬೀದಿ ಬದಿ ವ್ಯಾಪಾರಸ್ತರ ಕುಂದುಕೊರತೆ ಪರಿಹಾರಕ್ಕೆ ಒತ್ತಾಯ

ವಿಜಯಪುರ:ಮಾ.24: ಪಟ್ಟಣ ಮಾರಾಟ ಸಮಿತಿಯ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾಸ್ತರ ಕುಂದುಕೊರತೆಗಳ ಪರಿಹಾರಿಹಾರಕ್ಕಾಗಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆ ಒಕ್ಕೂಟ ಮತ್ತು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಲಕ್ಷ್ಮಣ ಹಂದ್ರಾಳ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಹಾಗೂ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಸಭೆಯಲ್ಲಿ ಠರಾವು ಆದ ಪ್ರತಿಗಳನ್ನು ಒದಗಿಸಿರುವುದಿಲ್ಲ ಠರಾವು ಆದ ವಿಷಯಗಳನ್ನು ಇನ್ನುವರಿಗೆ ಜಾರಿ ಮಾಡಿರುವುದಿಲ್ಲ. ಬೀದಿ ಬದಿ ವ್ಯಾಪಾರಸ್ಥರ ಜಿಪಿಎಸ್ ಸರ್ವೆಯನ್ನು ಮಾಡಲಾಗುತ್ತಿದ್ದು ಈಗಾಗಲೇ 187 ಜನ ಬೀದಿ ಬದಿ ವ್ಯಾಪಾರಸ್ತರು ಸ್ಥಳಾವಕಾಶವಿಲ್ಲದೆ ವ್ಯಾಪಾರದಿಂದ ವಂಚಿತರಾಗಿದ್ದಾರೆ. ಇವರು ನೆಹರು ಮಾರುಕಟ್ಟೆ ಹಾಗೂ ಹೂ ಮಾರುವಂತಹ ವ್ಯಾಪಾರಸ್ಥರು ಇವರಿಗೆ ಸ್ಥಳವಕಾಶ ಒದಗಿಸಿ ಜಿಪಿಎಸ್ ಸರ್ವೆ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಜೊತೆಗೆ ಬಬಲೇಶ್ವರ ನಾಕಾದಲ್ಲಿರುವ 11 ತಳ್ಳುವ ಗಾಡಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ನಿರುದ್ಯೋಗಿಯಾಗಿದ್ದಾರೆ. ಇವರಿಗೆ ಗೋದಾವರಿ ಹತ್ತಿರ ವೆಡ್ಡಿಂಗ್‍ಜೂನ್ ಮಾಡಿಕೊಡುತ್ತೇವೆ ಎಂದು ಹೇಳಿದ್ದು ಇದುವರೆಗೂ ವೆಡ್ಡಿಂಗ ಜೂನ್‍ನನ್ನು ಮಾಡಿರುವುದಿಲ್ಲ. ಇದರ ಕುರಿತು ಸಾಕಷ್ಟು ಬಾರಿ ಆಯುಕ್ತರಿಗೆ ಮನವಿ ಮಾಡಲಾದರೂ ಸ್ಪಂದಿಸುತ್ತಿಲ್ಲ. ಡೆನಲ್ಮ ಯೋಜನೆಯಲ್ಲಿ ಬಂದಂತಹ ಯೋಜನೆಗಳನ್ನು ಟಿವಿಸಿ ಸದಸ್ಯರ ಗಮನಕ್ಕೆ ತರುವುದಿಲ್ಲ. ಬೀದಿಬದಿ ವ್ಯಾಪಾರಸ್ಥರಿಗೆ ಬ್ಯಾಂಕ ಲೋನ್ ಕೊಡುತ್ತಿದ್ದು, ನಕಲಿ ಬೀದಿ ಬಿದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಲೋನ ಕೊಡಲಾಗಿದ್ದು ಇದರ ಕುರಿತು ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ.

ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹವಾದಂತಹ ಸದಸ್ಯತ್ವ ಹಣ ಹಾಗೂ ನವೀಕರಣ ಮಾಡಿದ ಹಣ ಯಾವ ಖಾತೆಯಲ್ಲಿ ಜಮಾ ಮಾಡಿದೆ ಎಂದು ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ ತಿಳಿಸಿರುವದಿಲ್ಲ. ಹಾಗೂ 2019 ರಲ್ಲಿ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಆಯ್ಕೆಯಾಗಿದ್ದು ಇದುರವರೆಗೂ ಮಹಾನಗರಪಾಲಿಕೆ ಕಚೇರಿಯಲ್ಲಿ ನಾಮಫಲಕವನ್ನು ಹಾಕಿರುವುದಿಲ್ಲ. ಜಕಾತಿ ಹಣವನ್ನು ಟಿವಿಸಿ ಸದಸ್ಯರ ಒಂದು ಪ್ರತ್ಯೇಕ ಖಾತೆಗೆ ಜಮಾ ಮಾಡುವುದಾಗಿ ಠರಾವಿನಲ್ಲಿ ಹೇಳಿದ್ದು ಇದುವರೆಗೂ ಜಾರಿಯಾಗಿಲ್ಲ.

ಮೈನು ಬೀಳಗಿ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರನ್ನು 3 ವರ್ಷಗಳ ಹಿಂದೆ ಅವರನ್ನು ವಕ್ಕಲೆಬ್ಬಿಸಿದ್ದು ಅವರಿಗೆ ಇದುವರೆಗೆ ಸ್ಥಳವಕಾಶ ಒದಗಿಸಿರುವುದಿಲ್ಲ ಸರಕಾರ ಬೀದಿ ಬದಿ ವ್ಯಾಪಾರಸ್ತರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೂ ಅನೇಕ ಸಭೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರ ಪರವಾಗಿ ವಾದ ಮಾಡಿದರು ಸ್ಪಂದಿಸುತ್ತಿಲ್ಲ. ಈ ಜಿಪಿಎಸ್ ಸರ್ವೆಯನ್ನು ಎಲ್ಲ ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಥಳವಕಾಶ ಒದಗಿಸಿ ವೈಜ್ಞಾನಿಕವಾಗಿ ಜಿಪಿಎಸ್ ಮಾಡಬೇಕೆಂದರು.

ಲಾಲಸಾಬ ಕೊರಬು ಮಾತನಾಡಿ ಬಬಲೇಶ್ವರ ನಾಕಾದಲ್ಲಿರುವ 11 ತಳ್ಳುಗಾಡಿ ವ್ಯಾಪಾರಸ್ಥರಿಗೆ ಗೋದಾವರಿ ಹತ್ತಿರ ವೆಡ್ಡಿಂಗ್ ಜೂನ್ ಮಾಡಿ ಸ್ಥಳಾವಕಾಶ ಮಾಡಿಕೊಡುವದಾಗಿ ಆಯುಕ್ತರು ಭರವಸೆ ನೀಡಿದ್ದು ಆದರೆ ಇದುವರೆಗೆ ಅದನ್ನು ಜಾರಿ ಮಾಡಿರುವುದಿಲ್ಲ 11 ಜನರಿಗೆ ಬದುಕು ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಬ್ದುಲರಜಾಕ ಬಾಗವಾನ, ಅಬ್ದುಲಸತ್ತರ ಬಾಗವಾನ, ಮಹಿಬೂಬ ಬಾಗವಾನ, ಅಂಬುಬಾಯಿ ಗೊಗರೆ, ಯಲ್ಲಪ್ಪ ಘೋರ್ಪಡೆ, ರುಕ್ಮೀಣಿ ಬುರುಡ, ಭೀಮಾಶಂಕರ, ಮಹಿಬೂಬ ಒಂಟಿ, ಸೋಮಪ್ಪ ಆಯೆಟ್ಟಿ ಮಹಾದೇವ ಕೂಡಗಿ, ಶಬ್ಬಿರ ಬೀಳಗಿ, ಸಿದ್ದು ಹಡಪದ, ಲಕ್ಷ್ಮೀ ಶಿವಗೋಳ ಮತ್ತಿತರರು ಉಪಸ್ಥಿತರಿದ್ದರು.