ಬೀದಿ ಬದಿಯ ವ್ಯಾಪಾರಸ್ಥರಿಗೆ ಕರೋನ್ ವ್ಯಾ ಕ್ಸಿನ್

ಲಿಂಗಸುಗೂರ.ಜೂ.೦೨-ಕೊರೋನ್ ನಿಯಂತ್ರಣ ಮಾಡಲು ಪ್ರತಿಯೊಬ್ಬರು ವ್ಯಾಕ್ಸಿನ ಪಡೆದು ಕೊಳ್ಳುವುದು ಸರ್ಕಾರದ ಮುಖ್ಯೇ ಕಾರ್ಯವಾಗಿದೆ ಇತಂಹ ಲಾಕ್‌ಡೌನ್ ಸಮಯದಲ್ಲಿ ಲಿಂಗಸುಗೂರು ಬೀದಿ ಬದಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಾಹಿಬೂಬ್ ಪಾಷಾ ಮನವಿ ಮೇರೆಗೆ ಸ್ಥಳೀಯ ಪುರಸಭೆಯ ಪಕ್ಕದ ದೊಡ್ಡ ಹನುಮಂತ ದೇವಸ್ಥಾನದಲ್ಲಿ ಲಿಂಗಸುಗೂರ ನಗರದ ಬೀದಿ ಬದಿಯ ವ್ಯಾಪರಸ್ಥರನ್ನು ಕಳೆದ ಮೂರು ದಿನದಿಂದ ೩೨೦ ಜನ ಬೀದಿ ಬದಿಯ ವ್ಯಾಪಾರಸ್ಥರು ಅವರ ಕುಟುಂಬಗಳಿಗೆ ಕೊರೋನಾ ಪ್ರಥಮ ಹಂತದ ವ್ಯಾಕ್ಸಿನ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ್, ನೋಡಲ್ ಅಧಿಕಾರಿರಾಜಾಕ್ ಕರಡಿ ನರ್ಸಿಂಗ್ ಅಧಿಕಾರಿ ಅಪ್ಸರಾ, ಮಹಿಳಾ ಸಹಾಯಕಿ ಗಿರಿಜಾ ಹಾಗೂ ಹೋಮಗಾರ್ಡ್ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸನ್ಮಾಸಲಾಯಿತು.
ಈ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರ ಸ್ಥರ ಸಂಘದ ಅಧ್ಯಕ್ಷ ಮಾಹಿಬೂಬ್ ಪಾಷಾ, ಉಪಧ್ಯಕ್ಷ ಜಗ್ಗು, ಸದಸ್ಯರಾದ ರವಿಗೌಡ ಹಾಲಬಾವಿ, ಅಮರೇಶ, ಮಹಾಂತೇಶ, ರಾಜುರೆಡ್ಡಿ ಉಪಸ್ಥಿತರಿದ್ದರು.