ಬೀದಿ ಬದಿಯ ವ್ಯಾಪರಿಗಳಿಂದ ಬಾಡಿಗೆ ವಸೂಲಿ : ದಂಧೆ ಕೊರರಿಗೆ ಕಡಿವಾಣ

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಸಂಘಟನೆ ಆಗ್ರಹ
ಲಿಂಗಸುಗೂರು.ಆ.೦೪- ಲಿಂಗಸುಗೂರು ನಗರದಲ್ಲಿ ಹೊಸ ಬಸ್ ನಿಲ್ದಾಣದ ಹತ್ತಿರ ಸರಕಾರಿ ಪದವಿಪೂರ್ವ ಕಾಲೇಜ ಪುರಸಭೆ ಕಾರ್ಯಾಲಯದ ಮುಂದೆ ಬಸವಸಾಗರ ಕ್ರಾಸ್ ಕರ್ನಾಟಕ ಬ್ಯಾಂಕ್ ಹಾಗೂ ಎಸ್.ಬಿ.ಐ. ಬ್ಯಾಂಕ್ ಹತ್ತಿರ ಹೀಗೆ ಅನೇಕ ಕಡೆಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಜಾಗಗಳಲ್ಲಿ ಅಕ್ರಮವಾಗಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಗಮನಕ್ಕೆ ಬಂದಿದ್ದು.
ಪುರಸಭೆ ಜಾಗದಲ್ಲಿ ಮೊದಲಿನಿಂದ ನಾವು ವ್ಯಾಪಾರ ಮಾಡಿಕೊಂಡು ಬಂದಿರುತ್ತೇವೆ ಆದರೆ ಈಗ ನಿಮ್ಮ ಈ ಜಾಗದಲ್ಲಿ ಬಂಡಿಯನ್ನು ಹಾಕಿಕೊಂಡು ವ್ಯಾಪಾರ ಮಾಡಲು ನಮಗೆ ಬಾಡಿಗೆ ಕೊಡ ಬೇಕಾಗುತ್ತದೆ ಎಂದು ಕೆಲವು ದಂದೆಕೋರರು ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದಾರೆ ವಿಷಯಕ್ಕೆ ಸಂಬಂಧಿಸಿದಂತೆ ತಾವು ಖುದ್ದಾಗಿ ಬಂದು ಸ್ಥಳವನ್ನು ಪರಿಶೀಲನೆ ಮಾಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಜಾಗಕ್ಕೆ ಬಾಡಿಗೆ ಎಂದು ಹಣ ಪಡೆಯುತ್ತಿರುವ ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಲಿಂಗಸುಗೂರು ಸಂಘಟನೆಯ ಮೂಲಕ ಒತ್ತಾಯಿಸುತ್ತೇವೆ.
ಒಂದು ವಾರದ ಒಳಗಡೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೈನ್ಯೆ ಕಾರ್ಯಕರ್ತರು ಪುರಸಭೆ ಕಾರ್ಯಾಲಯದ ಮುಂದೆ ಧರಣಿ ಮಾಡಲಾಗುತ್ತದೆ ಎಂದು ವೆಂಕಟೇಶ ಜಿ .ಉಪ್ಪಾರ ತಾಲೂಕ ಅಧ್ಯಕ್ಷರು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ.ಕ.ರ.ಯು.ಸೈ. ಕಾರ್ಯಕರ್ತರಾದ ವಿರೇಶ ಪೂಜಾರಿ ಹನುಮಂತ, ಪ್ರವಿಣ್ಣ, ಯಲ್ಲಪ್ಪ, ಅಶೋಕ್ ,ಅಮರೇಶ, ವಿನಯ ,ಸಂಜಯ, ಬಸವ, ಪ್ರಕಾಶ್ ಉಪಸ್ಥಿತರಿದ್ದರು.