ಬೀದಿ ನಾಯಿ ದಾಳಿ ಕುರಿಮರಿಗಳು ಸಾವು..!

ಸುರಪುರ: ಡಿ.1:ತಾಲ್ಲೂಕಿನ ಆಲ್ದಾಳ ಗ್ರಾಮದ ಹೊರವಲಯದಲ್ಲಿ ಕುರಿಗಳ ಹಿಂಡಿನ ಮೇಲೆ ನಾಯಿ ದಾಳಿ ನಡೆಸಿ ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ರಾಮದ ಹೊರವಲಯದ ದೊಡ್ಡಿಯಲ್ಲಿರುವ ಕುರಿಮರಿಗಳ ಮೇಲೆ ಬೀದಿ ನಾಯಿ ದಾಳಿ ಮಾಡಿದ ಪರಿಣಾಮ ದುರಗಪ್ಪ ಬಂಡೆಪ್ಪ ಎಂಬುವವರಿಗೆ ಸೇರಿದ ಸುಮಾರು 12 ಕುರಿಮರಿಗಳು ಬಲಿಯಾಗಿವೆ.

ಮುಖಂಡ ರಮೇಶ ದೋರೆ ಆಲ್ದಾಳ ಮಾತನಾಡಿ ದುರುಗಪ್ಪ ಎನ್ನುವ ಬಡ ರೈತ ಸಾಲ ಮಾಡಿ ಕುರಿಗಳನ್ನು ಖರೀದಿಸಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಆದರೆ ಕುರಿಮರಿಗಳ ಸಾವಿನಿಂದ ರೈತ ಸಂಕಷ್ಟಕ್ಕಿಡಾಗಿದ್ದು ಸರಕಾರ ರೈತನ ನೆರವಿಗೆ ಬರುವಂತೆ ಒತ್ತಾಯಿಸಿದರು.