ಬೀದಿ ನಾಯಿ ದಾಳಿ:ಬಾಲಕಿ ಗಂಭೀರ ಗಾಯ

ರಾಯಚೂರು, ಅ.೧೮- ನಗರದ ಐಡಿಎಸ್‌ಎಂಟಿ ಬಡಾವಣೆಯಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಬಾಲಕಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬಾಲಕಿಯರು ಮಕ್ಕಳು, ಹಾಗೂ ಹಿರಿಯ ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಪ್ಪಿಸುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ.
ಹಲ್ಲೆಗೊಳಗಾದ ಪುನೀತಾ ಎಂಟು ವರ್ಷದ ಬಾಲಕಿ ಎಂದು ಗುರುತಿಸ ಲಾಗಿದೆ. ನಿನ್ನೆ ಸಂಜೆ ಬಡಾವಣೆಯಲ್ಲಿ ಪುನಿತಾಳ ತಂದೆ ಸುಧಾಕರಗೂ ನಾಯಿಗಳು ಅಲ್ಲೇ ಮಾಡಿ ಗಾಯಗೊಳಿಸಿದವು. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಬಂದಾಗ ಮಗಳಿಗೂ ನಾಯಿ ಕಚ್ಚಿದ್ದಕ್ಕೆ ಕುಟುಂಬದಲ್ಲಿ ತೀವ್ರ ಬೇಸರ ವ್ಯಕ್ತವಾಗಿದೆ.
ಪುನಿತಾಳ ಮೇಲೆ ದಾಳಿ ಮಾಡಿದ್ದ ನಾಯಿ ತಲೆ ಬೆನ್ನು, ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಅದೆ ರಸ್ತೆಯಲ್ಲಿ ವಾಹನ ಸವಾರನೊಬ್ಬ ಬಂದಿದ್ದ ರಿಂದ ಬಾಲಕಿ ಬಚಾವ್ ಆಗಿದ್ದಾಳೆ.ಇದೆ ಸ್ಥಳದಲ್ಲಿ ಹಿರಿಯ ನಾಗರಿಕರಾದ ಮಹಿಬೂಜಿಗೂ ಕಚ್ಚಿ ಗಾಯಗೊಳಿಸಿದೆ. ನಗರದ ಸಿಯತಲಾಬ್, ಸೇರಿದಂತೆ ವಿವಿಧ ಬಡಾವಣೆಯಲ್ಲಿ ಬೀದಿ ನಾಯಿಗಳು ಹತ್ತಕ್ಕೂ ಹೆಚ್ಚು ಜನರ ಮೇಲೆ ನಾಯಿ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದಿ ನಾಯಿಗಳು ಹಾವಳಿ ತಪ್ಪಿಸಬೇಕು, ನಗರಸಭೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.