ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಮನವಿ

ಸೇಡಂ, ಮೇ,18: ಇಲ್ಲಿನ ಬ್ರಹ್ಮಣ ಗಲ್ಲಿ ಬಡಾವಣೆಯಲ್ಲಿರುವ ಸಾಕು ನಾಯಿಗಳು ಬಡಾವಣೆಯ ವಿವಿಧ ನಾಯಿಗಳು ಸೇರಿ ಸುಮಾರು 10 ರಿಂದ 15 ಜನರ ಮೇಲೆ ದಾಳಿ ಮಾಡಿದ್ದು ಬಡಾವಣೆಯ ನಿವಾಸಿಗಳಿಗೆ ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ,ಬೀದಿ ನಾಯಿಗಳು ರಸ್ತೆಯ ಮೇಲೆ ಹೋಗುವ ಪಾದಚಾರಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ತಕ್ಷಣ ಸಂಬಂಧ ಪಟ್ಟ ಪುರಸಭೆಯು ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಬಡಾವಣೆಯ ನಿವಾಸಿ ಶಂಕ್ರಪ್ಪ ತಂ ಕಲ್ಯಾಣರಾವ ಅವರು ಪುರಸಭೆಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.


ಇತ್ತೀಚೆಗೆ (16-05-2024) ನನ್ನ 03 ವರ್ಷನ ಹುಡುಗನ ಮೇಲೆ ಬಿದಿ ನಾಯಿ ದಾಳಿಗೆ ಯತ್ನಿಸಿತ್ತು ಅದನ್ನು ಓಣಿಯ ಜನರು ರಕ್ಷಿಸಿದ್ದಾರೆ. ನಾಯಿಗಳ ಕಾಟ ಎಷ್ಟಿದೆ ಎಂದರೆ ರಸ್ತೆಯ ಮೇಲೆ ಓಡಾಡುವುದು ಕಷ್ಟವಾಗಿದೆ, ಹಗಲು ರಾತ್ರಿಯೆನ್ನದೆ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ.
ಶಂಕ್ರಪ್ಪ ವಕೀಲರು
ಬ್ರಹ್ಮಣ ಗಲ್ಲಿ ನಿವಾಸಿ