ಬೀದಿ ನಾಯಿಗಳ ಹಾವಳಿ: ಕುರಿ ಮರಿ ಸಾವು

ಲಿಂಗಸುಗೂರ,ಜೂ.೨೪-
ತಾಲೂಕಿನ ಆನಾಹೊಸುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮರಗಂಟನಾಳ ಗ್ರಾಮದ ಹೊರವಲಯದಲ್ಲಿ ಕುರಿ ಹಟ್ಟಿ ಮೇಲೆ ಏಕಾಏಕಿ ದಿಢೀರನೆ ಬೀದಿ ನಾಯಿಗಳ ದಾಳಿಗೆ ಶುಕ್ರವಾರದಂದು ನಡೆದ ದಾಳಿಗೆ ಬಲಿಯಾದ ಸುಮಾರು ಇಪ್ಪತ್ತು ಕುರಿ ಮರಿ ಸಾವನ್ನಪ್ಪಿದ ಘಟನೆ ಜರುಗಿದೆ.
ಕುರಿಗಾಹಿಗಳು ಕುರಿ ಕಾಯಲು ಹೋದ ಸಂದರ್ಭದಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾದ ಕುರಿ ಮರಿ ಸಾವನ್ನಪ್ಪಿದ ಘಟನೆ ತಿಳಿದು ತಾಲೂಕಿನ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಚಪ್ಪ ಇವರು ಜಿಲ್ಲೆಯ ಮೇಲಾಧಿಕಾರಿಗಳಿಗೆ ಪರಿಹಾರಕ್ಕೆ ಶಿಫಾರಸು ಪತ್ರ ಬರೆದು ಕುರಿಗಾಹಿಗಳಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ಕಳ್ಳಿ ಲಿಂಗಸುಗೂರು ಗ್ರಾಮದ ಬಸವರಾಜ ಗದ್ದೆಪ್ಪ ಮಲ್ಲಪ್ಪ ಎಂಬುವರು ದಿಕ್ಕು ತೋಚದೆ ತಲೆ ಮೇಲೆ ಕೈ ಇಟ್ಟು ಕಣ್ಣಿರು ಹಾಕುವ ಮೂಲಕ ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.
ಬೀದಿ ನಾಯಿಗಳ ಕಡಿವಾಣಕ್ಕೆ ಪಶು ಇಲಾಖೆ ಮುಂದಾಗಬೇಕು:
ತಾಲ್ಲೂಕಿನಲ್ಲಿ ಇರುವ ಬೀದಿ ನಾಯಿಗಳ ಸರ್ವೇ ಕಾರ್ಯ ಮಾಡಬೇಕು ಮತ್ತು ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಇದರಿಂದಾಗಿ ಜನಜೀವನ ಅಸ್ತವ್ಯಸ್ತ ವಾಗುತ್ತದೆ ಕೂಡಲೇ ತಾಲುಕು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜೀವ ಸಂಕುಲ ರಕ್ಷಣೆ ಮಾಡಿ ಪ್ರಾಣ ಹಾನಿಯಾಗದಂತೆ ತಡೆಗಟ್ಟಲು ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮರಗಂಟನಾಳ ಗ್ರಾಮದಲ್ಲಿ ಒಂದೆ ಗ್ರಾಮದಲ್ಲಿ ಸುಮಾರು ಸರಾಸರಿ ೮೦ಕ್ಕೂ ಹೆಚ್ಚು ಬೀದಿ ನಾಯಿಗಳ ಇರುತ್ತದೆ ಇದರಂತೆ ಪ್ರತಿಯೊಂದು ಗ್ರಾಮದಲ್ಲಿ ಅರವತ್ತು ಎಪ್ಪತ್ತು ನಾಯಿಗಳ ಇದ್ದುದು ಕಂಡುಬರುತ್ತದೆ. ಅದಕ್ಕಾಗಿ ಪಶು ಇಲಾಖೆ ಅಧಿಕಾರಿಗಳು ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿದಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಹಯೋಗದಲ್ಲಿ ಸರ್ವೇ ಕಾರ್ಯ ಮಾಡಬೇಕು ಎಂಬುದು ನಾಗರಾಜ್, ತಿಪ್ಪಣ್ಣ ಮ್ಯಾಗಳಮನಿ, ಹುಸೇನಪ್ಪ ಕರಡಕಲ್, ಶರಣಪ್ಪ ಕರಡಕಲ್, ಷರೀಫ್ ಸಾಬ್, ಅಲ್ಲಾವುದ್ದೀನ್ ಪಟೇಲ್ ಸೇರಿದಂತೆ ಹಲವು ನಾಗರಿಕರು ಪಶು ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.