ಬೀದಿ ನಾಯಿಗಳ ದಾಳಿ ಜಿಂಕೆ ಸಾವು

ಶಿಡ್ಲಘಟ್ಟ.ಮೇ,೧೪:ದಿಬ್ಬೂರಹಳ್ಳಿ ವಲಯದ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳಿಂದ ಕೊಡಿದ್ದರೂ ಜಿಂಕೆಗಳು ನಾಡಿನತ್ತ ಬರುತ್ತಿರುವುದು ಸಾಮಾನ್ಯವಾಗಿದೆ, ಅದೇ ರೀತಿಯಲ್ಲಿ ಇಂದು ಗಾಂಡ್ಲಚಿಂತ ಗ್ರಾಮದ ಕಡೆ ಬಂದ ಜಿಂಕೆಯನ್ನು ಬೀದಿನಾಯಿಗಳು ಅಟ್ಟಾಡಿಸಿಕೊಂಡು ಕಚ್ಚುತ್ತಿರುವ ವೇಳೆಯಲ್ಲಿ
ಗ್ರಾಮಸ್ಥರು ತಡೆದು ತಕ್ಷಣ ಕೂಡಲೇ ಅದಕ್ಕೆ ನೀರು ಕುಡಿಸಿ ಉಪಚರಿಸಿ ಅರಣ್ಯ ಇಲಾಖೆಗೆ ತಿಳಿಸಿದ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ಗಾಂಡ್ಲಚಿಂತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ತಕ್ಷಣ ಅರಣ್ಯ ಅಧಿಕಾರಿಗಳು ಆಗಮಿಸಿ ಗಾಂಡ್ಲಚಿಂತ ಗ್ರಾಮದಲ್ಲಿ ನಾಯಿಗಳಿಗೆ ದಾಳಿಯಾಗಿ ತೀರ್ವ ಅಸ್ವಸ್ಥ ಯಾಗಿದ್ದ ಕಾರಣ ದಿಬ್ಬೂರಹಳ್ಳಿ ಪಶು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದರೂ ಪಲಕಾರಿಯಾಗದೆ ಅಸುನೀಗಿದ ಕಾರಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಸಂದರ್ಭದಲ್ಲಿ ವಲಯ ಅಧಿಕಾರಿ ಸುಧಾಕರ್, ಊಪ ವಲಯ ಅರಣ್ಯಾದೀಕಾರಿ ಜಯಚಂದ್ರ. ಸಿಬ್ಬಂದಿಗಳಾದ ಸಂದೀಪ್ ಲೋಕೇಶ್ ನರಸಿಂಹಪ್ಪ ನಾಗರಾಜು ಇದ್ದರು.