ಬೀದಿ ನಾಟಕ ಮೂಲಕ ಜನಜಾಗೃತಿ

ಕಲಬುರಗಿ:ಜೂ.2: ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ನಗರದ ಎಚ್‍ಸಿಜಿ ಆಸ್ಪತ್ರೆಯಿಂದ ನಗರದ ರೈಲು ನಿಲ್ದಾಣ ಸೇರಿ ವಿವಿಧ ಕಡೆಗಳಲ್ಲಿ ಕಲಾವಿದರಿಂದ ಬೀದಿ ನಾಟಕ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ತಂಬಾಕು ಸೇವನೆಯಿಂದಾಗುವ ಕೆಟ್ಟ ಪರಿಣಾಮ ಕುರಿತು ಕಲಾವಿದರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮನ ಮುಟ್ಟುವಂತೆ ವಿವರಿಸಿದರು. ತಂಬಾಕು ಸೇವಿಸುವುದರಿಂದ ಆರೋಗ್ಯದ ಮೇಲೆ ಬೀರುವ ಮಾರಕ ಪರಿಣಾಮ ಕುರಿತು ಕಲಾವಿದರು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಅಂಜನ್ ಪೋದ್ಧಾರ್, ವೀರೇಶ ಕಿರಣಗಿ, ಸದ್ಧಾಂ ಹುಸೇನ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.