ಬೀದಿ ನಾಟಕಗಳಿಗೆ ಅವಕಾಶ ನೀಡಲು ಮನವಿ

ಹೊನ್ನಾಳಿ.ಸೆ.೨೦; ಕೊರೊನಾ ವೈರಸ್ ಸೋಂಕಿನಿAದ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಬೀದಿ ನಾಟಕಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ತಕ್ಷಣ ಬೀದಿ ನಾಟಕಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು “ಬೀದಿ ನಾಟಕ ಕಲಾ ತಂಡ”ಗಳ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಹೇಳಿದರು. ಪಟ್ಟಣದಲ್ಲಿ ಅವರು ಪತ್ರಿಕಾ ಹೇಳಿಕೆ ನೀಡಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಹಾಗೂ ಎಲ್ಲಾ ತಾಲೂಕುಗಳಲ್ಲಿ ಜಾಗೃತಿ ಮೂಡಿಸುವ ಬೀದಿ ನಾಟಕಗಳು ಆರಂಭಗೊಳ್ಳಬೇಕು. ಇದಕ್ಕೆ ಅವಕಾಶ ನೀಡಬೇಕು ಎಂದು ವಿನಂತಿಸಲಾಗಿದೆ ಎಂದು ತಿಳಿಸಿದರು.ಕೊರೊನಾ ಎಫೆಕ್ಟ್ನಿಂದ ಬೀದಿ ನಾಟಕಗಳ ಕಲಾವಿದರ ಬದುಕು ದುಸ್ತರವಾಗಿದ್ದು, ಬೀದಿ ನಾಟಕಗಳಿಗೆ ಅವಕಾಶ ಮಾಡಿಕೊಟ್ಟರೆ ಬದುಕಿನ ಬಂಡಿ ಸಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ಬೀದಿ ನಾಟಕ ಕಲಾ ತಂಡಗಳ ಸಂಘಟನೆಯ ಪದಾಧಿಕಾರಿಗಳಾದ ಜಿಗಳಿ ರಂಗನಾಥ್, ಚನ್ನಗಿರಿ ಹೇಮಂತ್, ಮಲ್ಲೇಶಪ್ಪ, ಹನುಮಂತಪ್ಪ, ಆಶಾ, ರಾಂಪುರ ಹಾಲೇಶ್, ಜಗಳೂರು ಬಡಪ್ಪ ಮತ್ತಿತರರು ಉಪಸ್ಥಿತರಿದ್ದರು.