ಬೀದಿ ದೀಪ ನಿರ್ವಹಣೆ ಕಳಪೆ: ಬೇಕಾ ಬಿಟ್ಟಿ ಬಲ್ಬ್ ಪೂರೈಸಲು ತೇಜಪ್ಪ ಯಾರು?-ಸದಸ್ಯರು ತೀವ್ರ ಆಕ್ರೋಶ


ನಿನ್ನೆ ಸಂಜೆ ಆಯುಕ್ತರ ಭೇಟಿ-ವಿದ್ಯುತ್ ಅಭಿಯಂತರ ತರಾಟೆ-ವಿದ್ಯುತ್ ಸಾಮಗ್ರಿ ಮೂರನೇ ತಂಡ ತಪಾಸಣೆಗೆ ಸೂಚನೆ

ರಾಯಚೂರು ನ ೧೧:-ನಗರ ವಿದ್ಯುತ್ ಕಳಪೆ ನಿರ್ವಹಣೆ ವಿರುದ್ಧ ತೀವ್ರ ಸಮಧಾನ ವ್ಯಕ್ತ ಪಡಿಸಿದ ಸದಸ್ಯರು ನಿನ್ನೆ ಆಯುಕ್ತರ ಮುಂದೆ ಆಕ್ರೋಶ ತೋಡಿಕೊಂಡು ವಾರ್ಡ್‌ಗಳಗೆ ೬ ರಿಂದ ೮ ವಿದ್ಯುತ್ ಬಲ್ಬ್ ಮತ್ತು ಇತರ ಉಪಕರಣ ಪೂರೈಸಲು ತೇಜಪ್ಪ ಯಾರು ಎಂದು ಕೆಂಡಾಮಂಡಲವಾದರು.
ನಿನ್ನೆ ಸಂಜೆ ನಗರಸಭೆಯಲ್ಲಿ ಸಭೆ ಸೇರಿದ ಸದಸ್ಯರು ನಂತರ ನೇರವಾಗಿ ಆಯುಕ್ತರ ಕಚೇರಿಗೆ ತೆರಳಿ ನಗರ ವಿದ್ಯುತ್ ನಿರ್ವಹಣೆ ಗುತ್ತಿಗೆ ಚೈತನ್ಯ ಎಲೆಕ್ಟ್ರಿಕಲ್ಸ್ ಬೆಂಗಳೂರು ಇವರಗೆ ನೀಡಲಾಗಿದೆ. ನೇರವಾಗಿ ಅವರು ವಾರ್ಡ್‌ಗಳಿಗೆ ವಿದ್ಯುತ್ ಬಲ್ಬ್ ಮತ್ತು ಉಪಕರಣಗಳ ಪೂರೈಸಬೇಕು. ಆದರೆ ನಗರದಲ್ಲಿ ತೇಜಪ್ಪ ತಿಂಗಳಿಗೆ ೨೮೦೦ ರೂ ಮೌಲ್ಯದ ವಿದ್ಯುತ್ ಉಪಕಗಳನ್ನು ಕಳಿಸುತ್ತಾರೆ. ಪ್ರತಿ ತಿಂಗಳು ಲಕ್ಷಾಂತರ ರೂ ಬಿಲ್ ಮಾಡಲಾಗುತ್ತದೆ. ನಗರದಲ್ಲಿ ವಿದ್ಯುತ್ ನಿವಹಣೆ ಕಳಪೆ ಮಟ್ಟದಿಂದ ಜನರಿಗೆ ನಾವು ಉತ್ತರ ನೀಡಬೇಕಾಗಿದೆ.
ವಿದ್ಯುತ್ ದೀಪ ನಿರ್ವಹಣೆ ಗುತ್ತಿಗೆಯಲ್ಲಿ ಉಪ ಗುತ್ತಿಗೆ ನೀಡಲಾಗಿದೆಯೇ ಎಂದು ಸದಸ್ಯರು ಆಯುಕ್ತ ಮುನಿಸ್ವಾಮಿ ಅವರನ್ನು ಕೇಳಿದರು. ಟೆಂಡರ್ ಮೂಲಕ ಗುತ್ತಿಗೆಯನ್ನು ಚೈತನ್ಯ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದೆ. ಯಾವುದೆ ಉಪ ಗುತ್ತಿಗೆ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಉಪ ಗುತ್ತಿಗೆ ಇಲ್ಲದಿದ್ದಾಗ ತೇಜಪ್ಪ ಹೇಳಿದಂತೆ ಕೇಳಲು ತೇಜಪ್ಪ ಯಾರು ಎಂದು ವಿದ್ಯುತ್ ಕಿರಿಯ ಅಭಿಯಂತರರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ನಗರ ವಿದ್ಯುತ್ ದೀಪ ವಿಷಯಕ್ಕೆ ಸಂಬಂಧಿಸಿದಂತೆ ನೇರವಾಗಿ ನಿಮ್ಮನ್ನು ಕೇಳುತ್ತೇವೆ ಎಂದು ಸದಸ್ಯರು ಆಯುಕ್ತರಿಎ ಹೇಳಿದರು. ಕಿರಿಯ ಅಭಿಯಂತರರು ವಿದ್ಯುತ್ ದೀಪ ಮತ್ತು ಇತರೆ ಸಾಮಗ್ರಿಗಳನ್ನು ಕಳುಹಿಸುವಂತೆ ಸೂಚಿಸಿದ ಸದಸ್ಯರು, ತೇಜಪ್ಪ ಇದರಲ್ಲಿ ಧಖಲಂದಾಜ್ ಮಾಡುವಂತಿಲ್ಲ ಎಂದು ಕರಾರುವಕ್ಕಾಗಿ ಹೇಳಿದರು. ಆಡಳಿತಾಧಿಕಾರಿ ಅವಧಿಯಲ್ಲಿ ನಗರ ವಿದ್ಯುತ್ ದೀಪ ನಿರ್ವಹಣೆಗೆ ಒಟ್ಟು ಎಂಟು ಬ್ಯಾಚ್‌ಗಳಿದ್ದವು. ಆದರೆ ಈಗ ಕೇವಲ ಮೂರು ಬ್ಯಾಚ್‌ಗಳು ಮಾತ್ರ ಇವೆ. ಉಳಿದ ಐದು ಬ್ಯಾಚ್ ಗಳು ಎಲ್ಲಿ ಹೋದವು ಎಂದು ಕೇಳಲಾಯಿತು.
ಆಯುಕ್ತರು ಮಧ್ಯ ಪ್ರವೇಶಿಸಿ, ಎಂಟು ಬ್ಯಾಚ್‌ಗಳಲ್ಲಿ ಇದ್ದ ಸಿಬ್ಬಂದಿ ಈಗ ಇದ್ದರು ಬ್ಯಾಚ್ ಕಡಿಮೆ ಮಾಡಿದ್ದು ಏಕೆ ಎಂದು ಕಿರಿಯ ಅಭಿಯಂತರಿಗೆ ಕೇಳಿದರು. ಇದಕ್ಕೆ ಕಿರಿಯ ಅಭಿಯಂತರರು ಪ್ರತಿಕ್ರಿಯಿಸಿ ಸುಮಾರು ೬ ಜನರನ್ನು ಕೆಲಸದಿಂದ ತೆಗೆಯಾಗಿದೆ ಎಂದು ಹೇಳಿದರು. ನಗರದಲ್ಲಿ ಅಳವಡಿಸಲು ತರುವ ಬಲ್ಬ್ ಮತ್ತು ಇತರೆ ಉಪಕರಣಗಳು ಕಳಪೆ ಗುಣ ಮಟ್ಟದಿಂದ ಕೂಡಿವೆ. ಇದರಿಂದಾಗಿ ಬಲ್ಬ್‌ಗಳು ಒಂದು ವಾರವು ಬಾಳಿಕೆಗೆ ಬರುವುದಿಲ್ಲ.
ಕಾರಣ ಬಲ್ಬ್ ಸೇರಿದಂತೆ ಎಲ್ಲ ಉಪಕರಣಗಳನ್ನು ಬೆಂಗಳೂರಿನಿಂದ ತರಿಸಬೇಕು. ಉಪಕರಣ ಬಂದ ನಂತರ ಇವನ್ನು ಮೂರನೆ ತಂಡ ಪರಶೀಲಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಗುಣ ಮಟ್ಟದ ಉಪಕರಣ ಪೂರೈಸಲು ಅನುಕೂಲವಾಗುತ್ತದೆ.ಕಳೆದ ಸಾಮಾನ್ಯ ಸಭೆಯಲ್ಲಿ ಎರಡು ತಿಂಗಳ ವಿದ್ಯುತ್ ಬಿಲ್ ಪಾವತಿಗೆ ಸೂಚಿಸಲಾಗಿತ್ತು. ಎರಡು ತಿಂಗಳಲ್ಲಿ ಎಷ್ಟು ಸಾಮಗ್ರಿ ಪೂರೈಕೆ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಉದ್ದೇಶಿತ ಎರಡು ತಿಂಗಳಿಗೆ ಸಂಬಂಧಿಸಿ ಗುತ್ತೇದಾರರು ಯಾವುದೆ ಉಪಕರಣಗಳನ್ನು ಪೂರೈಸಿಲ್ಲ ಎಂದು ಸ್ಪಷ್ಟಿ ಪಡಿಸಿದರು.
ಗುತ್ತೇದಾರರು ಉಪಕರಣ ಪೂರೈಸದೆ ಇದ್ದಾಗ ಅವರಿಗೆ ಬಿಲ್ ಪಾವತಿಸದಿರುವಂತೆ ಸೂಚಿಸಿದರು.ಸದಸ್ಯರ ತೀರ್ಮಾನಕ್ಕೆ ವಿರುದ್ಧವಾಗಿ ಬಿಲ್ ಪಾವತಿಸಿದರೆ, ಎಲ್ಲ ಸದಸ್ಯರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು. ನಗರ ವಿದ್ಯುತ್ ನಿರ್ವಹಣೆ ಸಮರ್ಪಕವಾಗಿ ನಡೆಸಬೇಕು. ಬಡಾವಣೆಗಳಲ್ಲಿ ವಿದ್ಯುತ್ ಸೌಕರ್ಯ ಸುಧಾರಣೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ನಗರ ವಿದ್ಯುತ್ ನಿರ್ವಹಣೆಗೆ ಸಂಬಂಧಿಸಿದಂತೆ ನಗರಸಭೆ ಸದಸ್ಯರ ಮಧ್ಯ ತೀವ್ರ ಅಸಮಧಾನವಿತ್ತು. ಪ್ರತ್ಯೇಕವಾಗಿ ಹೇಳಿಕೆ ನೀಡಿ ಸುಧಾರಣೆಗೆ ಒತ್ತಾಯಿಸುತ್ತಿದ್ದರು. ಆದರೆ, ಇದರಿಂದ ಯಾವುದೆ ಉಪಯೋಗ ಆಗದೆ ಇರುವುದರಿಂದ ನಿನ್ನೆ ಬಹುತೇಕ ಸದಸ್ಯರು ನಗರಸಭೆಯಲ್ಲಿ ಸೇರಿ ಆಯುಕ್ತರಿಗೆ ತಮ್ಮ ಅಸiಧಾನವನ್ನು ನೇರವಾಗಿ ತೋಡಿಕೊಂಡಿದ್ದಾರೆ. ಇದರಿಂದಾದರು ನಗರದಲ್ಲಿ ವಿದ್ಯುತ್ ನಿರ್ವಹಣೆ ವ್ಯವಸ್ಥೆ ಸುಧಾರಿಸುವುದೆ ಎಂದು ನೋಡಬೇಕಾಗಿದೆ.
ಈ ಸಂದರ್ಭದಲ್ಲಿ ಜಯಣ್ಣ, ರವೀಂದ್ರ ಜಾಲ್ದಾರ್. ನರಸಿಂಹಲು ಮಾಡಗಿರಿ, ಕಡಗೋಳ ಆಂಜಿನಯ್ಯ, ಸಾಜೀದ್ ಸಮೀರ್, ರಮೇಶ, ಹರಿಬಾಬು, ತಿಮ್ಮಪ್ಪ ನಾಯಕ, ವಾಹಿದ, ಹರೀಶ್ ನಾಡಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.