ಬೀದಿ ದೀಪ ದುರಸ್ತಿಗೆ ಮನವಿ : ಗುತ್ತೇದಾರ

ಕಾಳಗಿ.ಜು.17: ಪಟ್ಟಣದ ವಿವಿಧಡೆ ಬೀದಿ ದೀಪಗಳ ನಿರ್ವಹಣೆ ಅಸಮರ್ಪಕವಾಗಿದ್ದು, ರಾತ್ರಿ ವೇಳೆ ದೀಪಗಳು ಬೆಳಗುವುದಿಲ್ಲ. ಇದರಿಂದಾಗಿ ಎಲ್ಲೆಡೆ ಕತ್ತಲೆ ಆವರಿಸಿರುತ್ತದೆ. ಜನರು ಸುರಕ್ಷಿತವಾಗಿ ಓಡಾಡಲು ತೊಂದರೆಯಾಗಿದೆ ಎಂದು ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಸಮಿತಿ ವತಿಯಿಂದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಅಧ್ಯಕ್ಷ ದತ್ತು ಗುತ್ತೇದಾರ ಮಾತನಾಡಿ ಪಟ್ಟಣದಲ್ಲಿ ಒಂದು ವಾರದಿಂದ ಬೀದಿ ದೀಪಗಳು ಬೀಳುತ್ತಿಲ್ಲ. ವಿದ್ಯುತ್ ಕಂಬಗಳಿಗೆ ಯಾರಾದರೂ ಕೈಹಚ್ಚಿ ಮುಟ್ಟಿದಲ್ಲಿ ವಿದ್ಯುತ್ ಶಾಕ್ ಹೊಡೆಯುತ್ತದೆ. ಕಾಳಗಿ ಬಸ್ ನಿಲ್ದಾಣದಲ್ಲಿ ಮತ್ತು ಕಾಳೇಶ್ವರ ದೇವಸ್ಥಾನದಲ್ಲಿ ಹೈಮಾಕ್ಸ್ ದೀಪವನ್ನು ಅಳವಡಿಸಬೇಕು. ಬಸ್ ನಿಲ್ದಾಣ ಹತ್ತಿರ ನಿರ್ಮಿಸಿದ ಶೌಚಾಲಯದಲ್ಲಿ ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕವಾಗಿ ಮೂತ್ರ ವಿಸರ್ಜನೆ ಕೋಣೆ ಮಾಡಿ ಮೂತ್ರ ವಿಸರ್ಜನೆಗೆ ಹಣ ತೆಗೆದುಕೊಳ್ಳದಂತೆ ಸೂಚಿಸಬೇಕು. ರಾಮನಗರ ಕೇರಿಯಲ್ಲಿ ಶೌಚಾಲಯ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಸಮಸ್ಯೆಗಳನ್ನು 3 – 4 ದಿನಗಳಲ್ಲಿ ಬಗೆಹರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯ್ತಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಯುವ ಕರ್ನಾಟಕ ರಕ್ಷಣಾ ಸೇನೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಯುವ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ದತ್ತು ಗುತ್ತೇದಾರ, ಉಪಾಧ್ಯಕ್ಷ ಅನಿಲಕುಮಾರ ಗುತ್ತೇದಾರ, ಕಾರ್ಯದರ್ಶಿ ಇಬ್ರಾಹಿಂ ಶಾಹಾ, ಗ್ರಾ.ಘ. ಅಧ್ಯಕ್ಷ ಅವಿನಾಶ ಗುತ್ತೇದಾರ, ರಾಜ್ಯ ಘಟಕ ಸದಸ್ಯರಾದ ಚಿತ್ರಶೇಖರ ದಂಡೋತಿಕರ್, ರಾಜು ಜಾಧವ ಇದ್ದರು.