ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.25 : ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಧೋರಣೆಗೆ ನಗರದ ಬಹುತೇಕ ವಾರ್ಡ್‍ಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದ ಜನರಿಂದ ಛೀಮಾರಿ ಹಾಕಿಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಗರಸಭೆ ಸದಸ್ಯರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ನಗರಸಭೆ ಅಧ್ಯಕ್ಷೆ ಎ.ಲತಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ವ್ಯತ್ಯಯ, ಶಿಥಿಲಗೊಂಡ ಕಂಬಗಳ ಬದಲಾವಣೆ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಒಂದು ಗಂಟೆಗೂ ಆಧಿಕ ಸಮಯ ಚೆರ್ಚೆ ನಡೆಸಿ, ಸಾಮೂಹಿಕವಾಗಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಜೆಸ್ಕಾಂ ಇಲಾಖೆಗೆ ನೀರಿನ ಸಂಪರ್ಕ ಕಡಿತಗೊಳಿಸಿ, ಜೆಸ್ಕಾಂ ಇಲಾಖೆ, ವಿದ್ಯುತ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳದೇ ಹೋದರೆ, ಜೆಸ್ಕಾಂ ಮುತ್ತಿಗೆ, ನಗರದ ಕೊಂಡನಾಯಕನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳಿಂದ ಯಾವುದೇ ಅನಾವುತ ಸಂಭವಿಸಿದರೆ, ಜೆಸ್ಕಾಂ ನೇರ ಹೊಣೆ ಮಾಡಿ, ಠರಾವ್ ಹೊರಡಿಸಿ ಎಂದು ಸದಸ್ಯ ಹುಲಗಪ್ಪ ಆಗ್ರಹಿಸಿದರು. ಎನಾದರೂ ಅನಾವುತ ಸಂಭಿಸಿದರೆ, ಯಾರು ಹೊಣೆ ಎಂದು 7 ,9 ನೇ ವಾರ್ಡಿನ ಸದಸ್ಯೆ ಹುಲುಗಪ್ಪ ಹಾಗೂ ಮುನ್ನಿಕಾಸಿಂ ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಇಲಾಖೆಯ ಇಂಜನಿಯರ್ ಲೋಕೇಶ್ ಮತ್ತು ಗವಿಸಿದ್ದಪ್ಪ ಅವರು, ಕೆಲ ತಾಂತ್ರಿಕ ಸಮಸ್ಯೆಗಳಿಂದ ವಿಜಯನಗರ ಎಕ್ಸ್‍ಪ್ರೆಸ್ ವಿದ್ಯುತ್ ಪೀಡರ್‍ನಿಂದ ಸಮರ್ಪಕ ವಿದ್ಯುತ್ ನೀಡಲು ಜೆಸ್ಕಾಂ ವಿಫಲವಾಗಿದೆ. ಶೀಘ್ರದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೆ ಉಪಾಧ್ಯಕ್ಷ ರೂಪೇಶ್ ಕುಮಾರ್ ಪ್ರತಿಕ್ರಿಯಿಸಿ, ಆ.5ರಂದು ಸಭೆ ನಿಗದಿ ಮಾಡಲಾಗುವುದು. ಈ ಸಭೆಯಲ್ಲಿ ಜೆಸ್ಕಾಂ ಹಿರಿಯ ಅಧಿಕಾರಿಗಳ ಕಡ್ಡಾಯವಾಗಿ ಭಾಗವಹಿಸಬೇಕು. ಅಂದು ಆಯಾ ವಾರ್ಡ್‍ಗಳ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಒಗದಿಸಬೇಕು ಎಂದು ತಾಕೀತು ಮಾಡಿದರು.ಜೆಸ್ಕಾಂ ಇಲಾಖೆ ಅನುದಾನ ಕೊರತೆ ಇರುವುದರಿಂದ ಬ್ಲಾಕ್ ಕೇಬಲ್, ಖರೀದಿ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿಂದತೇ ನೀವು ಮೊದಲು ಕೇಬಲ್ ಖರೀದಿಗಾಗಿ ಕ್ರೀಯಾ ಯೋಜನೆ ಸಿದ್ದಪಡಿಸಿದರೆ, ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು, ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
@12bc = ನಿವೇಶನಕ್ಕೆ ಮನವಿ:
ನಗರದಲ್ಲಿ ಒಟ್ಟು 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ 6 ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇವೆ. ಇನ್ನುಳಿದ 6 ಕೇಂದ್ರಗಳಿಗೆ ಸ್ವಂತ ನಿವೇಶನ ನೀಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ ಸಭೆಗೆ ಮನವಿ ಮಾಡಿದರು.
@12bc = ಪಾರ್ಕಿಂಗ್ ಜಾಗದ ಮಳಗೆ ತೆರವು:
ಪೌರಾಯುಕ್ತ ಮನೋಹರ್ ಮಾತನಾಡಿ, ನಗರದ ಪ್ರಮುಖ ರಸ್ತೆಗಳ ಪಾರ್ಕಿಂಗ್ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಂಡು ಕೆಲವರು ಬಾಡಿಗೆ ನೀಡಿದ್ದಾರೆ. ಈ ಕುರಿತು ನಗರದ 72 ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಜಾಗದಲ್ಲಿರುವ ಮಳಿಗೆಗಳನ್ನು ತೆರವುಗೊಳಿಸಲಾಗುವುದು ಎಂದರು.
ರಾಜಕಾಲುವೆಗಳ ದುರಸ್ತಿ: ನಗರದ ರಾಜಕಾಲುವೆ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ಜಿಲ್ಲಾ ಖನಿಜ ನಿಧಿಯಿಂದ 600 ಕೋಟಿ ರೂ ಅನುದಾನವನ್ನು ಜಿಲ್ಲಾಧಿಕಾರಿಗಳಲ್ಲಿ ಕೋರಲಾಗಿದೆ. ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಗರಸಭೆ ಸಭಾಂಗಣದ ಮೇಜಿನ ಮೇಲಿನ ಮೈಕ್‍ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವುಗಳನ್ನು ನೆಪಕ್ಕೆ ಹಿಡಲಾಗಿದೆ. ಸಭೆಯಲ್ಲಿ ವಿಷಯಗಳನ್ನು ಪ್ರಸ್ತಾಪವನೆ ಮಾಡುವಾಗ ಗಂಟಲು
ನಗರಸಭೆಯಿಂದ ಹೊಸ ಬಡಾವಣೆ ಅಭಿವೃದ್ಧಿ:
ನಗರದಲ್ಲಿರುವ 18 ಹೊಸ ಬಡಾವಣೆಗಳಿಗೆ ಹುಡಾದಲ್ಲಿ ಅರ್ಜಿಗಳು ಬಂದಿವೆ. ಈ ಬಡಾವಣೆಗಳನ್ನು ನಗರಸಭೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ. ಜಿಲ್ಲಾಧಿಕಾರಿಗಳಿಗೆ ಅಂತಿಮ ಅನುಮೋದನೆಗೆ ಕಳಹಿಸಲಾಗಿದೆ. ಇದರಿಂದ ನಗರಸಭೆಗೆ ಸುಮಾರು 150 ರಿಂದ 200 ಕೋಟಿ ಆದಾಯ ಹರಿದು ಬರಲಿದೆ ಎಂದು ಮಾಹಿತಿ ನೀಡಿದರು.
ಸುಂಕ ನಿಗದಿ:
ಸಂತೆ, ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವ ವ್ಯಾಪರಸ್ಥರಿಗೆ ಕನಿಷ್ಠ ಶುಂಕ (ಜಗಾತಿ) ನಿಗದಿ ಮಾಡಬೇಕು. ಇದರಿಂದ ನಗರಸಭೆ ಆದಾಯ ಬರುವುದಲ್ಲದೆ, ವ್ಯಾಪಾರಸ್ಥರಿಗೂ ಒಂದು ಜವಬ್ದಾರಿ ಬಂದು ಸ್ವಚ್ಚತೆಗೆ ಆಧ್ಯತೆ ನೀಡುತ್ತಾರೆ ಎಂದು ಸದಸ್ಯರು ಹೇಳಿದರು. ಇದಕ್ಕೆ ಬಹುತೇಕರು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚೆರ್ಚೆ ನಡೆಸಿದರು. ಸಭೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷೆ, ಸುಂಕಮ್ಮ, ಮಾಜಿ ಉಪಾಧ್ಯಕ್ಷ ಎಲ್.ಎಸ್. ಆನಂದ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ವಿವಿಧ ವಾರ್ಡ್‍ಗಳ ಸದಸ್ಯರು ಹಾಗೂ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.