ಬೀದಿ ದೀಪಗಳಿಲ್ಲದೆ ಜನ ಕತ್ತಲೆಯಲ್ಲಿ

ರಾಯಚೂರು.ನ.೧೧-ನಗರದಲ್ಲಿ ರಸ್ತೆಯ ವಿಭಾಜಕ ನಡುವೆ ಬೀದಿ ದೀಪಗಳ ಕಂಬದಲ್ಲಿ ಅಡಿಯಿಂದ ಮುಡಿಯವರೆಗೆ ಮಿನಗುವ ಚಿಕ್ಕ ಚಿಕ್ಕ ವಿದ್ಯುತ್ ದೀಪಗಳ ಅಲಂಕಾರ, ಸೌಂದರ್ಯ ಮಾಡಿದ್ದು, ಮಾಡುತ್ತಿರುವದು ಸ್ವಾಗತ. ಆದರೆ ಈ ವಿದ್ಯುತ್ ಬಿಲ್ ಯಾರು ಪಾವತಿಸುವರು?.
ನಗರದ ಸಾಕಷ್ಟು ವಾರ್ಡ್‌ಗಳ ಪ್ರಮುಖ ರಸ್ತೆಯಲ್ಲಿ ಬೀದಿ ದೀಪಗಳು ಬೆಳಕಿಲ್ಲ, ಸ್ವಚ್ಛತೆ ಇಲ್ಲವೇ ಇಲ್ಲ, ಆದರೆ ನಗರ ಮುಖ್ಯ ಪ್ರಮುಖ ರಸ್ತೆಯಲ್ಲಿ ಮಿನಗುವ ದೀಪಗಳ ಅಲಂಕಾರ ಎಷ್ಟ ಮಟ್ಟಿಗೆ ಸಾರ್ವಜನಿಕರಿಗೆ ನ್ಯಾಯ ಒದಗಿಸುತ್ತೆ. ನಗರದ ಎಲ್ಲ ವಾರ್ಡಗಳಲ್ಲಿ ಬೀದಿ ದೀಪಗಳ ಕುರಿತು ಚಿಂತನೆ, ಮತ್ತು ಸ್ವಚ್ಚತೆಯ, ಹಾಳಾದ ರಸ್ತೆಯ ಸುಧಾರಿಸಲು ಸಂಬಂಧಿಸಿದ ಇಲಾಖೆ ಗಮನಹರಿಸುವದು ಅತಿ ಅವಶ್ಯಕವಾಗಿ ರುತ್ತದೆಂದು ರಾಯಚೂರ ನಾಗರಿಕ ಪರವಾಗಿ ತಿಳಿಸುವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ. (ಶಿವರಾಮೇಗೌಡ ಬಣ)
ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ರಾಯಚೂರ ಜಿಲ್ಲಾಧ್ಯಕ್ಷ ಅಶೋಕಕುಮಾರ ಸಿ. ಕೆ. ಜೈನ್ ಅವರ ತಿಳಿಸಿದ್ದಾರೆ.
.