ಬೀದಿ ತರಕಾರಿ ವ್ಯಾಪಾರಸ್ಥರನ್ನು ಮಾರುಕಟ್ಟೆಗೆ ಸ್ಥಳಾಂತರಿಸದಿರಲು ಮನವಿ

??????

ಗುರುಮಠಕಲ್ :ನ.9: ಪಟ್ಟಣದ ಕೆಲವು ದಿನಗಳ ಹಿಂದೆ ರಸ್ತೆಮೇಲೆ ಕುಳಿತು ತರಕಾರಿ ಮಾರಟ ಮಾಡುವುದನ್ನು ನಿಷೇಧಿಸಿ ಇಂದಿರಾ ಗಾಂಧಿ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಪೊಲೀಸ್ ಇಲಾಖೆ ಸಹಯೋಗದಿಂದ ಪುರಸಭೆ ಎಚ್ಚರಿಕೆ ನೀಡಿದನ್ನು ವಾಪಸ್ಸು ಪಡೆಯಲು ಬೀದಿ ತರಕಾರಿ ವ್ಯಾಪರಸ್ಥರು ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಇರುವ ಇಂದಿರಾ ತರಕಾರಿ ಮಾರುಕಟ್ಟೆ ಅವ್ಯವಸ್ಥೆದಿಂದ ಹಾಗೂ ಮೂಲಭೂತ ಅಸೌಕರ್ಯಗಳಿಂದ ಕೂಡಿದೆ. ಬಸ್-ನಿಲ್ದಾಣದಿಂದ ದೂರ ಇರುವ ತರಕಾರಿ ಮಾರುಕಟ್ಟೆಗೆ ಜನರು ಬರುವುದಿಲ್ಲ. ಇದರಿಂದ ನಮ್ಮ ತರಕಾರಿ ವ್ಯಾಪರ ಆಗುವುದಿಲ್ಲ. ನಮ್ಮ ಬದುಕು ದುಸ್ಥಿರವಾಗುತ್ತದೆ ಮತ್ತು ಬಸ್-ನಿಲ್ದಾಣ ಆವರಣದಲ್ಲಿರುವ ಕಾಂಪ್ಲೆಕ್ಸ್‍ಗಳಲ್ಲಿ ತರಕಾರಿ ಅಂಗಡಿಗಳು ಬಹಳ ಇರುವುದರಿಂದ ಜನರು ಮಾರುಕಟ್ಟೆಗೆ ಬರಲು ಹಿಂಜರಿಯುತ್ತಾರೆ. ನಮ್ಮ ತರಕಾರಿ ವ್ಯಾಪರ ಬದುಕು ಅರ್ಥಿಕ ನಷ್ಟಕ್ಕೆ ಒಳಗಾಗುತ್ತದೆ. ಇದರಿಂದ ನಮಗೆ ಸಹಕಾರಿಸಬೇಕು. ರಸ್ತೆಯಲ್ಲಿ ಕುಳಿತು ನಮ್ಮ ಚಿಲ್ಲರೆ ತರಕಾರಿ ವ್ಯಾಪರಸ್ಥರಿಗೆ ಸಹಕಾರಿಸಬೇಕು ಇಲ್ಲಂದರೆ ಪರ್ಯಾಯವಾಗಿ ಬಸ್-ನಿಲ್ದಾಣ ಹತ್ತಿರ ಇರುವ ಲಕ್ಷ್ಮೀನಗರ ದಲ್ಲಿ ಉದ್ಯನ ಪಕ್ಕದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಅನುಕೂಲ ಮಾಡಿಕೊಡಬೇಕು ಅಥಾವ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೌಲಭ್ಯ ಒದಗಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ರಾಮುಲಮ್ಮ, ಬುಗ್ಗಮ್ಮ, ತಿಮ್ಮಮ್ಮ, ಆನಂದಮ್ಮ, ಬೀಮಮ್ಮ, ಅನೀತಾ, ಜಯಮ್ಮ, ನಾಗಮ್ಮ ಮತ್ತು ಮಂಜುಳಾ ಸೇರಿದಂತೆ ಇತರರು ಇದ್ದರು.