ಬೀದಿಬದಿ ವ್ಯಾಪಾರಿ ಸಂಘದಿಂದ ಬಸವ ಜಯಂತಿ

ಕಲಬುರಗಿ,ಏ.24- ವಿಶ್ವಗುರು ಬಸವೇಶ್ವರರ ಕಾಯಕ ತತ್ವದಿಂದ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ನಗರದ ಸುಪರ ಮಾರುಕಟ್ಟೆ ಸಿ.ಟಿ ಬಸ್ ನಿಲ್ದಾಣದ ಬಳಿ ಇರುವ ಸಂಘದ ಕಾರ್ಯಾಲಯದಲ್ಲಿಂದು ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀಬಸವಣ್ಣನವರ ಭಾಬಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಾಯಕ ಜೀವಿಗಳು ಮತ್ತು ಶ್ರಮಿಕ ವರ್ಗದವರೆಲ್ಲರೂ ಬಸವ ಭಕ್ತರಾಗಿದ್ದಾರೆ. ಶ್ರೀಬಸವಣ್ಣ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ, ಚಂದ್ರಹಾಸ ಚಿತ್ರೆ, ಡಾ.ವೇದಮೂರ್ತಿ, ರವಿ ಒಂಟಿ, ಹಣಮಂತ ದಂಡಗುಂಡ, ಸುಮು ಕವಲಗಾ, ಸಾಹೀರಾ ಬಾನು ಶಿವಾಜಿ ಶಿವಾನಂದ ಶೇಶಿ, ಅಂಬರೀಷ, ಸಿದ್ದು, ಪ್ರಶಾಂತ ರೋಹಿತ, ಮಹೇಶ ಮಾರುತಿ, ಶಂಕರ ಮತ್ತು ಬಾಬು ಪರೀಟ್ ಸೇರಿದಂತೆ ಹಲವರಿದ್ದರು.