
ನವಲಗುಂದ,ನ.9: ಮಳೆ, ಚಳಿ, ಬಿಸಿಲು ಲೆಕ್ಕಸದೆ ಸದಾ ತಮ್ಮ ವ್ಯಾಪಾರದಲ್ಲಿ ತೊಡಗುವ ಬೀದಿ ಬದಿ ವ್ಯಾಪಾರಿಗಳ ಗೌರವ ಬದುಕು ಕಟ್ಟಿಕೊಡಲು ಜಾರಿ ಮಾಡಲಾದ ಜೀವನ ರಕ್ಷಣೆ ಹಾಗೂ ರಸ್ತೆ ನಿಯಂತ್ರಣ ಕಾಯ್ದೆ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬನ್ನಿ ಎಂದು ನ್ಯಾಯವಾದಿ ಶ್ಯಾಮಸುಂದರ ಡಂಬಳ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬೀದಿಬದಿ ವ್ಯಾಪಾರಸ್ಥರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೀದಿಬದಿ ವ್ಯಾಪಾರಿಗಳಿಗೆ ಗ್ರಾಹಕರ ಕಾಯ್ದೆ ಸೇರಿದಂತೆ ಕಾನೂನಿನ ಮಾಹಿತಿ ನೀಡಿದರು.ಸಮಾಜದ ಏಳಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡಿದ ಬೀದಿ ವ್ಯಾಪಾರಿಗಳು ಸ್ವಚ್ಛತೆಗೆ ಅದ್ಯತೆ ನೀಡಬೇಕು. ನಿಮಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ರಚಿತವಾದ ಕಾನೂನು ಬಗ್ಗೆ ತಿಳುವಳಿಕೆ ಹೊಂದಿರಬೇಕು. ಬೀದಿ ಬದಿ ವ್ಯಾಪಾರಿಗಳ ಜೊತೆಗೆ ಸಮಾಜದ ಎಲ್ಲ ವರ್ಗದವರಿಗೆ ಉಚಿತ ಕಾನೂನು ನೆರವುನೀಡುತ್ತದೆ ಅದರ ಸದುಪಯೋಗ ಮಾಡಿಕೊಳ್ಳಿ' ಎಂದರು. ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರೀಯಾಜ ಅಹಮ್ಮದ್ ಮಾತನಾಡಿ,
ಸರ್ಕಾರದ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಕಾನೂನು ಪಾಲನೆ ಮಾಡಬೇಕು. ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಸುಚಿತ್ವ ಕಾಪಾಡಬೇಕು’ ಎಂದರು.
ಪುರಸಭೆಯ ಸಮುದಾಯ ಸಂಘಟಣಾಧಿಕಾರಿ ಜೆ ಎಸ್ ಕಣವಿ ಮಾತನಾಡಿ ಪ್ರಧಾನ ಮಂತ್ರಿ ಜನ ಧನ ಯೋಜನೆ, ಜೀವನ ಜ್ಯೋತಿ ಯೋಜನೆ, ಪಿಎಂ ಸುರಕ್ಷಾ ಭೀಮಾ ಯೋಜನೆ, ಶ್ರಮ ಯೋಗಿ ಮಂಥನ ಯೋಜನೆ, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ಬೀದಿಬದಿ ವ್ಯಾಪಾರಸ್ಥರು ಸದುಪಯೋಗ ಪಡೆದುಕೊಳ್ಳಿ ಎಂದರು
ಪುರಸಭೆ ಅಧಿಕಾರಿಗಳಾದ ಶೋಭಾ ಹೆಬ್ಬಳ್ಳಿ, ಸುರೇಖಾ ಪಾಟೀಲ್, ಸಿಬ್ಬಂದಿಗಳಾದ ಚೇತನಾ ಪೂಜಾರ್, ಭಾಗ್ಯಶ್ರೀ ಭಜಂತ್ರಿ, ಬೀದಿಬದಿ ವ್ಯಾಪಾರಸ್ಥರಾದ ದಾವಲಬಿ ಅಲ್ಲಿಬಾಯಿ, ಮರೆವ್ವ ನಡುವಿನಮನಿ, ರಶ್ಮಿ ಸಂಬಣ್ಣವರ, ಜಮಾಲ್ ಜಿಗಳೂರ್, ಮಮ್ಮದಲಿ ಮಿರ್ಜಿ, , ಮಹಮ್ಮದಲಿ ಭಾಗವಾನ್,ಬಸವರಾಜ್ ಹೇಬಸೂರ್, ರಾಮಣ್ಣ ಕಾಳಿ, ಮುಬಾರಕ್ ಜಮಖಾನ, ಸದ್ದಾಂಹುಸೇನ್ ಸೋಟಕನಾಳ ಇತರರು ಉಪಸ್ಥಿತರಿದ್ದರು