ಬೀದಿಬದಿ ವ್ಯಾಪಾರಿಗಳಿಗೆ ಮಾಸ್ಕ್, ಬಿಸ್ಕೆಟ್, ನೀರಿನ ಬಾಟಲ್ ವಿತರಣೆ

ರಾಯಚೂರು, ಜೂ.೪- ಇಂದು ಜಗದ್ಗುರು ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠ ಚಿತ್ರದುರ್ಗ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಕುಲಗುರು ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರು ೩೭ನೇ ಜನ್ಮದಿನದ ಅಂಗವಾಗಿ ಇಂದು ಬೆಳಿಗ್ಗೆ ಬ್ರೇಸ್ತವಾರ ಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೀದಿಬದಿ ವ್ಯಾಪಾರಿಗಳಿಗೆ ಮಾಸ್ಕ್, ಬಿಸ್ಕೆಟ್. ನೀರಿನ ಬಾಟಲ್ ಮಡಿವಾಳ ಮಾಚಿದೇವ ಸಮಾಜ ಯುವ ಘಟಕ ರಾಯಚೂರು ವತಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಮುಖಂಡರಾದ ಟಿ.ಮಲ್ಲೇಶ್, ಯು. ಅಂಜಿನಯ್ಯ, ಎ ಚಂದ್ರಶೇಖರ,ಬಸವರಾಜ ಪೋಲಿಸ್, ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಯುವ ಘಟಕ ಅಧ್ಯಕ್ಷ ಜಿ.ವೆಂಕಟೇಶ್, ಬಜಾರಪ್ಪ,ರವಿಕುಮಾರ್, ಡಿ.ಶಂಕರ್, ಟಿ.ವೀರೇಶ್, ವೀರೇಶ ಏರ್ ಟೆಲ್,ಈರೇಶ್ ಗೌಡ, ಗೋವಿಂದ, ಸೂರ್ಯಕಾಂತ, ಜಿ.ಶಿವರಾಜ್ ಗೌಡ, ಅಂಜಿನಯ್ಯ, ಡಿ.ಚಂದ್ರಶೇಖರ್ ಜಂಗ್ಲಿ, ಹಾಗೂ ಮಡಿವಾಳ ಸಮಾಜದ ಯುವಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.