ಬೀದಿಬದಿ ವ್ಯಾಪರಸ್ಥರಿಗೆ ಛತ್ರಿ ವಿತರಣೆ

ಕೋಲಾರ,ಜ,೧೯-ಜಿಲ್ಲೆಯಲ್ಲಿ ದಿನೇದಿನೇ ಬಿಸಿಲಿನ ತಾಪ ಹೆಚ್ಚಾಗಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪರಸ್ಥರಿಗೆ ನೆರಳು ಒದಗಿಸು ನಿಟ್ಟಿನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರ ನೇತೃತ್ವದಲ್ಲಿ ಛತ್ರಿಗಳನ್ನು ವಿತರಿಸಿದರು.
ಸಿಎಂಆರ್ ಶ್ರೀನಾಥ್ ಮಾತನಾಡಿ, ಜಿಲ್ಲೆಯ ಜನ ಕಷ್ಟಪಟ್ಟು ದುಡಿಯುವ ಜನ ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬೀದಿಬದಿ ವ್ಯಾಪಾರಸ್ಥರಿಗೆ ಸಿಎಂಆರ್ ಫೌಂಡೇಶನ್ ವತಿಯಿಂದ ಸಣ್ಣ ಸಹಾಯ ಮಾಡಿದ್ದೇವೆ, ಕೋವಿಡ್‌ನಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟವಾಗಿತ್ತು, ಕ್ರಮೇಣ ಬದಲಾಗಿ ಇವತ್ತು ತನ್ನ ದುಡಿಮೆಯ ಫಲವನ್ನು ನಂಬಿ ಬದುಕುವ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳಿದರು.
ಜೀವನ ನಡೆಸಲು ಬೀದಿ ಬದಿ ವ್ಯಾಪಾರಿಗಳು ಮಳೆ ಗಾಳಿ ಬಿಸಿಲು ಲೆಕ್ಕಿಸದೆ ಹಣ್ಣು ತರಕಾರಿ ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿರುತ್ತಾರೆ. ಸಮಾಜಕ್ಕೆ ಇವರ ಕೊಡುಗೆ ಅಪಾರವಾದದ್ದು. ಬಿಸಿಲು ಗಾಳಿ ಮಳೆಯ ತಡೆಗೆ ಛತ್ರಿ ಇವರಿಗೆ ಉಪಯೋಗವಾಗಲಿ ಕೋವಿಡ್ ಸಂದರ್ಭದಲ್ಲಿ ಸುಮಾರು ೨೦ ಸಾವಿರ ಆಹಾರ ಕಿಟ್ ಗಳು ನೀಡುವ ಮೂಲಕ ಸಾಮಾನ್ಯ ಬಡವರನ್ನು ಹಾಗೂ ಬೀದಿಬದಿ ವ್ಯಾಪಾರಸ್ಥರ ಕೈ ಹಿಡಿಯುವ ಕೆಲಸ ಮಾಡಿದ್ದೇನೆ, ಮುಂದಿನ ದಿನಗಳಲ್ಲಿ ವಿಶೇಷವಾಗಿ ಬೀದಿಬದಿ ವ್ಯಾಪಾರಸ್ಥರ ಕಷ್ಟಗಳಿಗೆ ಹೆಚ್ಚಿನ ಒತ್ತು ಕೊಟ್ಟು ನಿಮ್ಮ ಜೊತೆಗೆ ನಿಲ್ಲುವುದಾಗಿ ಭರವಸೆ ಕೊಟ್ಟರು.
ರಾಜ್ಯದಲ್ಲಿ ಕುಮಾರಣ್ಣರ ಮೈತ್ರಿ ಸರ್ಕಾರದಲ್ಲಿ ಬಡವರ ಬಂಧು ಕಾರ್ಯಕ್ರಮದ ಮೂಲಕ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಿದ್ದರು.
ಆದರೆ ಕಾಂಗ್ರೆಸ್ ಕುಮಾರಣ್ಣರನ್ನು ಅಧಿಕಾರದಿಂದ ಕೆಳಗಿಳಿಸಿದರು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಆಗ ಬಡವರು, ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಈ ಚುನಾವಣೆಯಲ್ಲಿ ಎಲ್ಲರೂ ಜೆಡಿಎಸ್ ಪಕ್ಷದ ಪರವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ಮುಖಂಡರಾದ ಮುರಳಿ, ಉಮರ್, ಆರೀಫ್ ಇದ್ದರು.