ಬೀದಿಬದಿ ಅಂಗಡಿಗಳ ತೆರವು ಖಂಡಿಸಿ ಜೆಡಿಎಸ್ ಪ್ರತಿಭಟನೆ

ಕಲಬುರಗಿ,ಆ.1- ಸುಪರ ಮಾರುಕಟ್ಟೆಯ ಬೀದಿಬದಿಯ ಚಪ್ಪಲ ಬಜಾರ, ಕಪಡಾ ಬಜಾರ ಅಂಗಡಿ ಮತ್ತು ಬಂಡಿಗಳ ತೆರವು ಗೊಳಿಸಿರುವುದನ್ನು ಖಂಡಿಸಿ ಜಾತ್ಯಾತೀತಿ ಜನತಾ ದಳ ಕಾರ್ಮಿಕ ಮತ್ತು ಉದ್ಯೋಗ ಘಟಕದ ನೆತೃತ್ವದಲ್ಲಿ ಬೃಹತ ಪ್ರತಿಭಟನೆ ಕೈಗೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಲಾಯಿತು.
ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಕೈಗೊಂಡ ಬೀದಿಬದಿಯ ಸಣ್ಣಪುಟ್ಟ ಅಂಗಡಿ ಮತ್ತು ಬೀದಿವ್ಯಾಪಾರಿಗಳನ್ನು ಉದ್ಧೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ನಾಯಕ ನಾಸೀರ ಹುಸೇನ ಉಸ್ತಾದ ಅವರು, ಇಲ್ಲಿನ 400 ಜನ ಬೀದಿ ಅಂಗಡಿ ವ್ಯಾಪಾರಿಗಳನ್ನು ಏಕಾಏಕಿ ತೆರವು ಗೊಳಿಸುವ ಮೂಲಕ ಅವರ ಜೀವನೋಪಯಕ್ಕೆ ಅಡ್ಡಿಪಡಿಸಲಾಗಿದೆ.
ಚಪ್ಪಲ ಬಜಾರ, ಕಪಡಾ ಬಜಾರ, ಬಂಡಿ ವ್ಯಾಪಾರವನ್ನೆ ಅವಲಂಬಿಸಿರುವ 400 ಬಡ ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ನೀಡದೇ ಬೀದಿಗೆ ತಳ್ಳಿರುವುದು ಖಂಡನೀಯ, ಬಹು ದಶಕಗಳಿಂದ ಇದೇ ವ್ಯಾಪಾರವನ್ನು ಅವಲಂಬಿಸಿ ಜೀವನ ಸಾಗಿಸುವ ಇಲ್ಲಿನ ಸಣ್ಣಪುಟ್ಟ ಬಡ ವ್ಯಾಪಾರಿಗಳಿಗೆ ಕೂಡಲೇ ಇದೇ ಸ್ಥಳಗಳಲ್ಲಿ ಸ್ಥಳವಕಾಶ ಕಲ್ಪಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಪಾಲಿಕೆ ಆಯುಕ್ತರಿಗೆ ಅವರು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಾತ್ಯಾತೀತಿ ಜನತಾ ದಳ ಕಾರ್ಮಿಕ ಮತ್ತು ಉದ್ಯೋಗ ಘಟಕದ ಜಿಲ್ಲಾಧ್ಯಕ್ಷ ಮೊಹ್ಮದ ಸಿರಾಜುದ್ದಿನ ಶೊಬೆರವಾಡಿ, ಕಾರ್ಯದರ್ಶಿ ಸಿರಾಜ ಶಾಬ್ದಿ, ಶೇಖ ಸೈಫನ್ ನ್ಯಾಯವಾದಿ ಕಲೀಮ, ಪಾಲಿಕೆ ಸದಸ್ಯರಾದ ಅಲಿಮ ಪಟೇಲ್ ಸೇರಿದಂತೆ ಹಲವರಿದ್ದರು.