ಬೀದಿನಾಟಕ ಪ್ರದರ್ಶನ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ.2. ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಜಾರಿಯಾಗಿರುವ ಜನಪರ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೀದಿನಾಟಕ ಪ್ರದರ್ಶನ ನಡೆಸಲಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಇವರ ನೇತೃತ್ವದಲ್ಲಿ, ಗ್ರಾಮೀಣ ಜನರಿಗೆ ಆರೋಗ್ಯದ ಯೋಜನೆಗಳ ಕುರಿತು ಬೀದಿನಾಟಕದ ಮೂಲಕ ಸರ್ಕಾರದ ಉಚಿತ ಸೌಲಭ್ಯಗಳ ಕುರಿತ ಆಯುಷ್ಮಾನ್ ಭಾರತ ಯೋಜನೆ, ಉಚಿತ ಆರೋಗ್ಯ ಸೇವೆ, ಅರ್ಹ ಬಡ ರೋಗಿಗಳಿಗೆ ಸಿಗುವ ಧನಸಹಾಯಗಳ ಕುರಿತು ಮಾಹಿತಿಗಳನ್ನು ಪರಿಚಯಿಸಲಾಯಿತು. ಹಾಗೂ ಕ್ಷಯರೋಗ, ಕುಷ್ಠರೋಗ ನಿರ್ಮೂಲನೆ, ನೈರ್ಮಲ್ಯ ಜಾಗೃತಿ, ಶೌಚಾಲಯಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು. ಸಿರಿವಾರ, ಎತ್ತಿನಬೂದಿಹಾಳು, ಹರಗಿನಡೋಣಿ, ಮಿಂಚೇರಿ, ಡಿ.ಕಗ್ಗಲ್, ಇತರೆ ಗ್ರಾಮಗಳಲ್ಲಿ ಫೆ.23 ರಿಂದ ಮಾರ್ಚ್2 ರವರೆಗೆ ಬೀದಿನಾಟಕ ಪ್ರದರ್ಶನ ಅಭಿಯಾನ ನಡೆಸಲಾಗಿದೆ. ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ಕಲಾವಿದರಾದ ಮಣಿಕಂಠ, ಶಿವರಾಜ್‍ತೋರಣಗಲ್ಲು, ನವೀನ್ ಪ್ರತಾಪ್, ಲಕ್ಷ್ಮಿ, ದಿವ್ಯ, ಮಂಜುನಾಥ, ಆಕಾಶ, ರಮೇಶ್, ಹುಲುಗೇಶ, ಇತರರು ಗ್ರಾಮೀಣ ಬಾಷಾ ಶೈಲಿಯಲ್ಲಿ ಸಂಭಾಷಣೆಗಳಿಂದ ಸಾರ್ವಜನಿಕರ ಮನಮುಟ್ಟುವಂತೆ ಅಭಿನಯಿಸಿ ಆರೋಗ್ಯದ ಅರಿವು ಮೂಡಿಸಿದರು. ಅಯಾ ಗ್ರಾಮಗಳ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿಯವರು, ಆಶಾಕಾರ್ಯಕರ್ತರು, ಬೀದಿನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡು ಜನರಿಗೆ ಇಲಾಖೆಯ ಸವಲತ್ತುಗಳ ಕುರಿತು ಮಾಹತಿ ನೀಡಿದರು.
ಪೋಟೊ: ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಕಲಾವಿದರು ಸಿರಿವಾರ ಗ್ರಾಮದಲ್ಲಿ ಬೀದಿನಾಟಕ ಪ್ರದರ್ಶಿಸಿದರು.