ಬೀದಿಗಿಳಿದು ಹೋರಾಡಿ: ಸಿದ್ದರಾಮಯ್ಯ

ಕೋಲಾರ,ಮಾ. ೨೯: ರಾಜ್ಯ ಸರ್ಕಾರಕ್ಕೆ ಒಂದು ಕಡೆ ಸಿಡಿಯ ಕಸಿವಿಸಿ ಇದ್ದರೆ ಇನ್ನೊಂದು ಕಡೆ ಜಾತಿ ಜನಾಂಗಗಳು ಒಟ್ಟಾಗಿ ಮೀಸಲಾತಿ ಹೋರಾಟಗಳುಸರ್ಕಾರವನ್ನು ಕೂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾರದ ಸ್ಥಿತಿ ಎದುರಾಗಿದೆ ಈನಡುವೆಯೇ ಕೋಲಾರದಲ್ಲಿ ಮಾಜಿ ಸಿಂಎ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ಜನರು ಬೀದಿಗಿಳಿಯುವಂತೆ ಕರೆ ನೀಡಿದ್ದಾರೆ..
ರಾಜ್ಯದಲ್ಲಿ ಒಂದೆಡೆ ಸಿಡಿ ಗದ್ದಲ ಮತ್ತೊಂದೆಡೆ ಮೀಸಲಾತಿ ಹೋರಾಟಗಳು ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದೆ,ಈ ಮಧ್ಯೆ ಕೋಲಾರಕ್ಕೆ ಆಗಮಿಸಿದ್ದಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗೆ ಕೊಂಡರಾಜನಹಳ್ಳಿಯ ಅಭಯ ಆಂನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ನಗರದ ಕ್ಲಾಕ್ ಟವರ್ ನಲ್ಲಿರುವ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರವಾಸಿ ಮಂದಿರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಸಿಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಮಾತನಾಡಿದರು. ಈ ವೇಳೆ ಡಿಕೆಶಿ ಹೀಗಾಗಲೆ ನನಗೂ ಸಿಡಿ ಲೇಡಿಗೂ ಸಂಬಂಧವಿಲ್ಲ ಎಂದಿದ್ದಾರೆ, ಹಾಗಾಗಿ ನಾನು ಪ್ರತಿಕೃಯೆ ನೀಡುವುದು ಸರಿಯಲ್ಲ, ಅಜ್ಞಾತ ಸ್ಥಳದಲ್ಲಿರುವ ಆಕೆ ಭಯದಿಂದ ಹೊರ ಬಂದು ದೂರು ನೀಡಬೇಕು ಎಂದು ಸಿಡಿ ಲೇಡಿಗೆ ಸಲಹೆ ಮಾಡಿದರು.
ಇನ್ನೂ ನಗರದ ಗಾಂಧಿಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಹಿಂದುಳಿದ ವರ್ಗಗಳ ಹೋರಾಟದಲ್ಲಿ ಭಾಗವಹಿಸಿದ ಅವರು, ಹಿಂದುಳಿದ ವರ್ಗಗಳ ಏಳಿಗೆಗಾಗಿ ನಾನು ಅಧಿಕಾರ ಇರಲಿ ಇಲ್ಲದಿರಲಿ ಹೋರಾಟ ಮಾಡುವೆ ಎಂದ್ರು. ಒಂದು ಗಂಟೆ ಭಾಷಣದಲ್ಲಿ ತಮ್ಮ ಅಹಿಂದ ಹೋರಾಟವನ್ನ ನೆನಪಿಸಿದರು. ರಾಜ್ಯದಲ್ಲಿ ಹಿಂದೆಯೂ, ಈಗಲೂ, ಮುಂದೆಯೂ ಹಿಂದುಳಿದ ವರ್ಗಗಳ ಪರವಾಗಿಯೇ ಹೋರಾಟಗಳನ್ನ ಮಾಡುವೆ ಎಂದು ಹೇಳಿದರು. ಇದೆ ವೇಳೆ ನೆರೆದಿದ್ದ ಕಾರ್ಯಕರ್ತರ ಮಧ್ಯೆ ಸಿದ್ದು ಅಭಿಮಾನಿಯೊಬ್ಬ ಹೌದು ಹುಲಿಯಾ ಎನ್ನುವ ಮೂಲಕ ಕೋಲಾರದಲ್ಲೂ ಹುಲಿಯಾ ಸದ್ದು ಜೋರಾಗಿಯೇ ಇತ್ತು. ತಮ್ಮ ಸುದೀರ್ಘ ಭಾಷಣದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ತಮ್ಮದೆ ಶೈಲಿಯಲ್ಲಿ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ. ಮೋದಿಯನ್ನ ವ್ಯಂಗ್ಯ ಮಾಡಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೀವ್ರ ಏರಿಕೆ ಕಂಡಿದೆ, ಆದ್ರೆ ಇಂದಿಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿಲ್ಲ ಎಂದು ಮೋದಿಯನ್ನ ವ್ಯಂಗ್ಯವಾಡಿದ್ರು. ಈವೇಳೆ ಅಲ್ಲಿ ನೆರೆದಿದ್ದ ಜನಕ್ಕೆ ನಿಮಗ್ಯಾರಿಗೂ ಕೋಪ ಬರೋದಿಲ್ವಾ ನೀವೆಲ್ಲಾ ಈಬಿಜೆಪಿ ಸರ್ಕಾರದ ವಿರುದ್ದ ಬೀದಿಗಳಿದು ಹೋರಾಟ ಮಾಡಬೇಕು ಎಂದು ಕರೆ ನೀಡಿ ನೆರೆದಿದ್ದ ಜನರನ್ನು ಬಿಜೆಪಿ ಸರ್ಕಾರದ ವಿರುದ್ದ ಹುರಿದುಂಬಿಸಿದರು.
ಒಟ್ನಲ್ಲಿ ರಾಜ್ಯದಲ್ಲಿ ಎದ್ದಿರುವ ಮೀಸಲಾತಿ ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದ ಸಿದ್ದರಾಮಯ್ಯ, ರಾಜ್ಯದ ಯಾವುದೆ ಜಿಲ್ಲೆಯಲ್ಲಿ ಹೋರಾಟಕ್ಕೂ ಸಿದ್ದ ಎಂದ್ರು.ಹೋರಾಟದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪ ಶಶಿಧರ್, ನಜೀರ್ ಅಹ್ಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.