ಬೀದಿಗಳಲ್ಲಿ ನಾಯಿ ಹಂದಿ ದನಗಳ ಹಾವಳಿ

ನಂಜನಗೂಡು: ನ.05:- ಮಟನ್ ಮತ್ತು ಚಿಕನ್ ಮಾರ್ಕೆಟ್ ಆರ್ ಪಿ ರಸ್ತೆ ಎಂಜಿಎಸ್ ರಸ್ತೆ ಮಾರ್ಕೆಟ್ ರಸ್ತೆಗಳಲ್ಲಿ ಹಿಂಡು ಹಿಂಡು ನಾಯಿಗಳು ರಸ್ತೆಯಲ್ಲೇ ಅಂಗಡಿಗಳ ಮುಂದೆ ನಿಂತುಕೊಂಡು ಚಿಕನ್ ಮತ್ತು ಮಟನ್ ಅಂಗಡಿ ಯವರು ವೇಸ್ಟೇಜ್ ಅನ್ನು ಅಂಗಡಿಯ ಮುಂಭಾಗ ಬಿಸಾಕುವುದು ಸಾಮಾನ್ಯವಾಗಿದೆ. ಅದನ್ನು ತಿನ್ನಲು ಗುಂಪು ಗುಂಪಾಗಿ ಕಚ್ಚಾಡಿ ಸಾರ್ವಜನಿಕರ ಮೈಮೇಲೆ ಬೀಳುವುದು ಪ್ರತಿದಿನ ನರಕ ಯಾತನೆ ಉಂಟಾಗಿದೆ.
ಇದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವುದಕ್ಕೆ ಭಯಭೀತರಾಗಿದ್ದಾರೆ ಈ ರಸ್ತೆಯು ಪ್ರತಿದಿನ ಸಾವಿರಾರು ಜನ ಓಡಾಡುವ ರಸ್ತೆ ಈ ರಸ್ತೆಯಲ್ಲಿ ಚಿಲ್ಲರೆ ಅಂಗಡಿಗಳು ತರಕಾರಿ ಮಾರ್ಕೆಟ್ ದಿನಸಿ ಅಂಗಡಿಗಳು ಅಕ್ಕಿ ವ್ಯಾಪಾರಿಗಳು ಹೆಚ್ಚು ಇರುವುದರಿಂದ ಸಾರ್ವಜನಿಕರು ಈ ರಸ್ತೆಯಲ್ಲಿ ಹೆಚ್ಚು ಹೆಚ್ಚು ಓಡಾಡುತ್ತಾರೆ ಈ ರಸ್ತೆಯಲ್ಲಿ ನಾಯಿಗಳು ಮಿತಿಮೀರಿ ಇರುವುದರಿಂದ ಓಡಾಡಲು ಮಕ್ಕಳು ಮತ್ತು ಸಾರ್ವಜನಿಕರು ಭಯಭೀತರಾಗಿ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಪ್ರತಿದಿನ ಇಡೀ ಶಾಪ ಹಾಕುತ್ತಿದ್ದಾರೆ.
ನಗರಸಭೆ ಅಧಿಕಾರಿಗಳಿಗೆ ಇದಕ್ಕೆ ಸಂಬಂಧಪಟ್ಟಂತೆ ಹಲವು ಬಾರಿ ದೂರುಗಳು ಹೋಗಿದ್ದರೂ ಕೂಡ ಪ್ರಯೋಜನವಿಲ್ಲ ನಾಯಿಗಳನ್ನು ಹಿಡಿಯಲು ಕಾನೂನು ಅಡ್ಡಿ ಉಂಟಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು ಕಾನೂನಿನ ಪ್ರಕಾರವೇ ನಾಯಿಗಳನ್ನು ಹಿಡಿಯಬೇಕೆಂದು ಸಾರ್ವಜನಿಕರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಹಂದಿಗಳ ಕಾಟ ಇವುಗಳು ಕೂಡ ನಗರದ ವ್ಯಾಪ್ತಿ ಒಳಗಡೆ ಸಾಕಾಣಿಕೆ ಮಾಡಬಾರದು ಎಂದು ಕಾನೂನು ಇದ್ದರೂ ಕೂಡ ಕಾನೂನನ್ನು ಉಲ್ಲಂಘಿಸಿ ಬಡಾವಣೆಗಳಲ್ಲಿ ಹಂದಿಗಳನ್ನು ಸಾಕಿ ಮುಂಜಾನೆಯ ರಸ್ತೆಗೆ ಬಿಡುತ್ತಾರೆ ಇವುಗಳು ಕೂಡ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಅಡ್ಡ ಬಂದು ಅನಾಹುತ ಉಂಟಾಗಿರುವ ಪ್ರಸಂಗಗಳು ಉಂಟಾಗಿದೆ ಇದಕ್ಕೂ ಕೂಡ ಅಧಿಕಾರಿಗಳಿಂದ ಕ್ರಮವಿಲ್ಲ. ನಗರಸಭೆ ಸದಸ್ಯರು ಕೂಡ ಸಭೆಗಳಲ್ಲಿ ಮಾತ್ರ ಈ ವಿಷಯವನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ ಪತ್ರಿಕೆಯಲ್ಲಿ ಈ ವಿಷಯ ಬರುವುದು ಅಷ್ಟಕ್ಕೆ ಸೀಮಿತವಾಗಿದೆ ಮಾರನೇ ದಿನ ಯಾವ ಸದಸ್ಯರು ಕೂಡ ಅಧಿಕಾರಿಗಳಿಗೆ ಈ ಕೆಲಸ ಮಾಡಲು ಒತ್ತಾಯ ಮಾಡುವುದಿಲ್ಲ ಪುನಃ ನಗರಸಭೆ ಮೀಟಿಗಿನಲ್ಲಿ ಇದೇ ಪ್ರಸಂಗ ಇದೇ ವಿಷಯ ಸದಸ್ಯರು ಮುಂದಿಟ್ಟು ಚರ್ಚೆ ಮಾಡುತ್ತಾರೆ ಒಟ್ಟಾರೆ ನಾಯಿಗಳು ಮತ್ತು ಹಂದಿಗಳು ಕಾಟ ನಂಜನಗೂಡಿನಲ್ಲಿ ಮಿತಿಮೀರಿ ಹೆಚ್ಚಿನ ಅನಾಹುತ ಉಂಟಾಗುವ ಬದಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಮತ್ತು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಒತ್ತಾಯ ಮಾಡಿ ನಾಯಿ ಮತ್ತು ಹಂದಿಗಳನ್ನು ಇಡಿಸುವ ಕಾರ್ಯ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದರ ಜೊತೆಗೆ ರಸ್ತೆಗಳಲ್ಲೇ ಅಡ್ಡಲಾಗಿ ನಿಂತಿರುವ ಬಿಡಾಡಿ ದನಗಳು ಪ್ರತಿದಿನ ರಸ್ತೆಗಳಲ್ಲಿ ಕೂಡ ಶಾಲ ವಾಹನಗಳು ದ್ವಿಚಕ್ರ ವಾಹನಗಳು ದೇವಸ್ಥಾನಕ್ಕೆ ಭಕ್ತಾದಿಗಳು ಬೆಳಿಗ್ಗೆಯಿಂದ ಸಂಜೆಯ ತನಕ ಈ ರಸ್ತೆಆಗಿರುವುದರಿಂದ ಇದೇ ರಸ್ತೆಯಲ್ಲಿ ಓಡಾಡುತ್ತಾರೆ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ ಅಂತ ಸಮಯದಲ್ಲಿ ಬಿಡಾಡಿ ದನಗಳ ಕಾಟ ಮಿತಿಮೀರಿದೆ ಇವುಗಳ ಬಗ್ಗೆ ಕೂಡ ಕ್ರಮವಹಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.