
ಬೀದರ:ಆ.12:ರಾಜ್ಯದಲ್ಲಿ ಸಹಕಾರ ಸಕ್ಕರೆ ಕಾರ್ಖಾನೆಗೆ ಉತ್ತಮ ಹೆಸರಾದ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಸ್ಥಿತಿ ಇಂದು ರಾಜಕೀಯ ಕಲ್ಮಷದಿಂದಾಗಿ ಜಿಲ್ಲೆಯ ಜನರಿಗೆ ನೆನಪು ಕೂಡ ಬಾರದೇ ಇರುವಂತಹದು ಆಗಿರುವುದು ಇತ್ತೀಚಿನ ಕಾರ್ಖಾನೆಯ ಅಧ್ಯಕ್ಷರುಗಳ ದುರಾಡಳಿತದಿಂದ ಎಂದು ಕಾಣಬಹುದಾಗಿದೆ. ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಹುಮತ ಸರ್ಕಾರ ಬಂದಿರುವುದು ಬೀದರ ಜನತೆಗೆ ಒಂದು ವರವಾಗಿದೆ.
ಕಾರ್ಖಾನೆಯ ನೊಂದ 10 ಸಾವಿರ ರೈತ ಮತ್ತು ಕಾರ್ಮಿಕರಿಗೆ ರಾಮಬಾಣವಾಗಿ ಕಾರ್ಖಾನೆಗೆ ಮರುಜೀವ ನೀಡಲು ಶ್ರಮಿಸಿ ಕಾರ್ಖಾನೆಯನ್ನು ಮುಂದುವರೆಸಬೇಕೆಂದು ಹಾಗೂ ಕಾರ್ಖಾನೆ ಕಾರ್ಮಿಕ ಸಿಬ್ಬಂದಿಗಳ 03 ವರ್ಷಗಳ ವೇತನ, ಪಿ.ಎಫ್. ಗ್ರ್ಯಾಚೂಟಿ, ಇನ್ಸುರೇನ್ಸ್ ಹಾಗೂ ಇನ್ನಿತರ ಕಾರ್ಖಾನೆಯ ಮೂಲಭೂತ ಸೌಕರ್ಯಗಳನ್ನು ಪರಿಗಣಿಸಿ ಒದಗಿಸಿಕೊಡಬೇಕೆಂದು ಈ ಮೂಲಕ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ವತಿಯಿಂದ ಮನವಿ ಸಲ್ಲಿಸಲಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕೆಂಪೇನೋರ್, ಸಂಗಮೇಶ ಏಣಕೂರ, ತುಕಾರಾಮ ರಾಗಾಪೂರೆ, ಮಸ್ತಾನ ಮುಲ್ಲಾ, ಸುರೇಶ ದೊಡ್ಡಿ, ಶಿವರಾಜ ಹಮೀಲಾಪೂರ, ವಿಲ್ಸನ್, ನವೀನ ಅಲ್ಲಾಪೂರೆ, ಡಾ. ಜೇಮ್ಸ್, ಕಮಲಹಾಸನ್ ಬಾವಿದೊಡ್ಡಿ, ಅಂಬಾದಾಸ ಆಲೂರೆ, ಸುಧಾಕರ, ನರಸಿಂಗ, ಸುಶೀಲಕುಮಾರ, ಸುಧಾಕರ, ಮೀಹನಕುಮಾರ ಇದ್ದರು