ಬೀದರ ಸರಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿಎಸ್‍ಎಸ್‍ಎಲ್‍ಸಿ ಯಲ್ಲಿ ಡಿಸ್ಟಿಂಕಷನ್‍ದಲ್ಲಿ ಉತ್ತೀರ್ಣ

ಬೀದರ, ಮೇ 10: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಬಾಲಕರ ಬಾಲಮಂದಿರ ಬೀದರನ ನಿವಾಸಿ ಕು. ಮಲ್ಲಿಕಾರ್ಜುನ ತಂದೆ ರಾಜಶೇಖರ ಅವರು 625ಕ್ಕೆ 586 ಅಂಕಗಳನ್ನು ಪಡೆದು 93.76% ಡಿಸ್ಟಿಂಕಷನ್‍ನಲ್ಲಿ ಉತೀರ್ಣರಾಗಿರುತ್ತಾರೆ.

ಸದರಿ ಬಾಲಕನು ವಿಶೇಷ ಮಕ್ಕಳ ಪಾಳನೆಯಲ್ಲಿದ್ದುಕೊಂಡು ಉತ್ತಮವಾಗಿ ವಿದ್ಯಾಭ್ಯಾಸವನ್ನು ಮಾಡಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಈ ಸಾಧನೆ ಮಾಡಿ ಕೀರ್ತಿ ತಂದಿರುತ್ತಾನೆ. ಈ ಪ್ರಯುಕ್ತ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಬೀದರ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಹರ್ಷ ವ್ಯಕ್ತಪಡಿಸಿ ಶುಭಹಾರೈಸಿರುತ್ತಾರೆಂದು ಬೀದರ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.