ಬೀದರ ಸಂಜೆವಾಣಿ ಕಾರ್ಯಾಲಯದಲ್ಲಿ ಲಕ್ಷ್ಮಿ ಪೂಜೆ ಸಂಪನ್ನ

ಸಂಜೆವಾಣಿ ವಾರ್ತೆ
ಬೀದರ್ :ನ.13:ನಗರದ ಶಿವನಗರ ಉತ್ತರದಲ್ಲಿರುವ ಬೀದರ್ ಸಂಜೆವಾಣಿ ಕಾರ್ಯಾಲಯದಲ್ಲಿ ನಿನ್ನೆ ರಾತ್ರಿ ಮಹಾಲಕ್ಷ್ಮಿ ಪೂಜೆ ಸಂಪನ್ನಗೊಂಡಿತ್ತು ಪ್ರಜಾಪಿತಾ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ ಶಿಲ್ಪಾ ಬಹೆನ್, ಜಗದ್ಗುರು ಪಂಚಾಚಾರ್ಯ ಪುಣ್ಯಶ್ರಮದ ಪೂಜ್ಯ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಪೂಜೆ ನೆರವೇರಿಸಿ ಕೊಟ್ಟರು,
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿ ಗುರುರಾಜ ಸ್ವಾಮಿ ಮೋಳಕೇರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ ಪ್ರಭುಲಿಂಗ ಸ್ವಾಮಿ, ಜಿಲ್ಲಾ ಕೈಗಾರಿಕಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ರಮೇಶ ಮಠಪತಿ, ಪ್ರಮುಖರಾದ ಡಾ.ರಾಜಕುಮಾರ ಹೆಬ್ಬಾಳೆ, ಕಲ್ಯಾಣರಾವ ಚಳಕಾಪುರೆ, ಪ್ರಕಾಶ ಕನ್ನಾಳೆ, ಸತೀಶ ಬೆಳಕೋಟೆ, ಸಂದೀಪ ಷಟಕಾರ, ಚಿತ್ರಾ ಶಿಲ್ಪಾ ಮಠಪತಿ, ಷಟಕಾರ, ಶಾಮಲಾ ಬಿರಾದಾರ, ದಯಾನಂದ ಸ್ವಾಮಿ ಸಿರ್ಸಿ, ಮಲ್ಲಿಕಾರ್ಜುನ ಬಿರಾದಾರ, ಶ್ರೀಕಾಂತ ಸ್ವಾಮಿ ಸೋಲಪುರ, ಸಂತೋಷ ಭೂರೆ, ಗೋರಕನಾಥ ಕುಂಬಾರ, ಸಂತೋಷ ಚೆಟ್ಟಿ, ಆನಂದ ಹುಣಜಿ, ಆಕಾಶ ಜೀರ್ಗಾ, ರುಕ್ಮಿಣಿ, ರಾಜಕುಮಾರ, ಬಸವಕುಮಾರ ಕು. ಭುವನೇಶ್ವರಿ, ಅಭಿಷೇಕ, ಚೆನ್ನಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಸತ್ಯವತಿ ಸ್ವಾಮಿ ಸ್ವಾಗತಿಸಿದರು. ಕಾರ್ತಿಕ ಮಠಪತಿ ಕಾರ್ಯಕ್ರಮ ನಿರೂಪಿಸಿದರು, ಪತ್ರಿಕೆಯ ಉಪ ಸಂಪಾದಕರು ಹಾಗೂ ಜಿಲ್ಲಾ ವರದಿಗಾರ ಶಿವಕುಮಾರ ಸ್ವಾಮಿ ವಂದಿಸಿದರು.