ಬೀದರ- ಯಶವಂತಪೂರ ರೈಲು ನ. 18ರಂದು ಪುನರಾರಂಭ

ಬೀದರ, ನ.16: ಕೊರೋನಾ ಮಹಾಮಾರಿಯಿಂದ ಸ್ಥಗಿತಗೊಂಡಿದ್ದ ಬೀದರ್- ಯಶವಂತಪೂರ್ ರೈಲು ನ. 18ರಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಭಗವಂತ್ ಖೂಬಾ ಅವರು ತಿಳಿಸಿದ್ದಾರೆ.
ವಾರಕ್ಕೆ ನಾಲ್ಕು ದಿನಗಳಂದು ಮಾತ್ರ ಯಶವಂತಪೂರ್- ಲಾತೂರ್ ವ್ಹಾಯಾ ಬೀದರ್ ರೈಲು ಸಂಚರಿಸಲಿದೆ. ರೈಲಿನ ಸದುಪಯೋಗ ಪಡೆದುಕೊರಂಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.
ಜಿಲ್ಲೆಯ ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕಳೆದ ಅವಧಿಯಲ್ಲಿ ಬೀದರ್- ಯಶವಂತಪೂರ್ ರೈಲನ್ನು ವಾರಪೂರ್ತಿ ಚಲಿಸುವಂತೆ ಮಾಡಿದ್ದೆ. ಜೊತೆಗೆ ನಗರದಿಂದ ಸುಮಾರು 13 ಹೊಸ ರೈಲುಗಳನ್ನು ಆರಂಭಿಸಿದ್ದೆ. ಆದಾಗ್ಯೂ, ಕೋವಿಡ್‍ನಿಂದ ಎಲ್ಲ ರೈಲುಗಳ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ಜಿಲ್ಲೆಯ ಜನತೆ ಬೆಂಗಳೂರಿಗೆ ಹೋಗಬೇಕಾದರೆ ಖಾಸಗಿ ವಾಹನಗಳಿಗೆ ಹೆಚ್ಚು ಬೆಲೆ ಕೊಟ್ಟು ಹೋಗಬೇಕಾಗುತ್ತಿತ್ತು. ಹೊರೆ ಬೀಳುವುದನ್ನು ಗಮನಿಸಿ, ದೇಶಾದ್ಯಂತ ಕೆಲವು ಕಡೆಗಳಲ್ಲಿ ರೈಲುಗಳನ್ನು ಪ್ರಾರಂಭಿಸಲಾಗಿದ್ದು, ಅದೇ ರೀತಿ ಬೀದರ್- ಯಶವಂತಪೂರ್ ರೈಲು ಆರಂಭಿಸಲು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ರಾಜ್ಯ ಸಚಿವ ದಿ. ಸುರೇಶ್ ಅಂಗಡಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಹೀಗಾಗಿ ಆ ಪ್ರಯುಕ್ತ ರೈಲು ಪುನರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.