ಬೀದರ ಭಾಜಪಾ ಜಿಲ್ಲಾಧ್ಯಕ್ಷರಾಗಿ ಸೋಮನಾಥ ಪಾಟೀಲ ಆಯ್ಕೆ ಅಭಿನಂದನೆ

ಬೀದರ, ಜ.16ಃ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಸೋಮನಾಥ ಪಾಟೀಲ ಅವರಿಗೆ ಹುಮನಾಬಾದಿನ ಮಾಜಿ ಶಾಸಕರಾದ ಸುಭಾಷ ಕಲ್ಲೂರ ಅವರ ಮನೆಯಲ್ಲಿ ಬೀದರ ಜಿಲ್ಲಾ ಸಹಕಾರ ಮಧ್ಯವರ್ತಿ ಬ್ಯಾಂಕಿನ (ಡಿಸಿಸಿ ಬ್ಯಾಂಕ್) ನಿರ್ದೇಶಕರಾದ ಬಸವರಾಜ ಕಾಮಶೆಟ್ಟಿ, ಮನ್ನಳ್ಳಿ ಪಿಕೆಪಿಎಸ್ ಸೋಸೈಟಿಯ ಅಧ್ಯಕ್ಷರಾದ ದೀಪಕ ಮನ್ನಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ಚೌಧರಿ ಅವರು ಶಾಲು ಹಾಗೂ ಹೂಗುಚ್ಛ ನೀಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹುಮನಾಬಾದಿನ ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಾಬುವಾಲಿ, ಭಾಜಪಾ ಮುಖಂಡರಾದ ಗುರುನಾಥ ಕೊಳ್ಳುರ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.