ಬೀದರ-ಬೆಂಗಳೂರು ವಿಮಾನ ಸೇವೆ: ಸಮಯ ಬದಲಾವಣೆ

ಬೀದರ,ಮೇ 18:ಬೀದರ ಜನತೆಯ ಮಹಾದಾಸೆಯಂತೆ, ಬೀದರ –
ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯ ಸಮಯ
ಬದಲಾವಣೆ ಮಾಡಿಸಲಾಗಿದ್ದು, ಎಲ್ಲಾ ಜನತೆ ಈ ಸಮಯ ಬದಲಾವಣೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರಸಚಿವ ಭಗವಂತ ಖೂಬಾರವರು ಜನತೆಯಲ್ಲಿಕೋರಿಕೊಂಡಿದ್ದಾರೆ.
ಸದ್ಯ ಬೀದರನಿಂದ ಸೋಮುವಾರ, ಬುಧವಾರ ಮತ್ತುಶುಕ್ರವಾರದಂದು ಬೆಂಗಳೂರಿನಿಂದ ಬೆಳಿಗ್ಗೆ 8.05 ಗಂಟೆಗೆಹೊರಟು ಬೆಳಿಗ್ಗೆ 9.15ಕ್ಕೆ ಬೀದರ ತಲುಪಲಿದೆ ಮತ್ತೆ ಬೆ. 9.40ಕ್ಕೆಬೀದರ ನಿಂದ ಹೊರಟು ಬೆಳಿಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದೆ.ಉಳಿದ ನಾಲ್ಕು ದಿನಗಳು ಮಂಗಳವಾರ, ಗುರುವಾರ, ಶನಿವಾರಮತ್ತು ರವಿವಾರದಂದು ಎಂದಿನಂತೆ ಸಾಯಂಕಾಲ 4.20ಕ್ಕೆ ಬಂದು ಸಾ.4.45ಕ್ಕೆ ಹೊರಟು ಸಾ. 5.50ಕ್ಕೆ ಬೆಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ.
ಆದಷ್ಟೂ ಬೇಗ ವಾರಪೂರ್ತಿ ಬೆಳಿಗ್ಗೆ ಹೊರಡುವ ಹಾಗೆವ್ಯವಸ್ಥೆ ಮಾಡುತ್ತೇನೆ ಮತ್ತು ಬೀದರ ನಿಂದ ದೇಶದ ಬೇರೆನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿಈಗಾಗಲೆ ಬೇರೆ ಬೇರೆ ವಿಮಾನಯಾನ ಸಂಸ್ಥೆಗಳೊಂದಿಗೆಮಾತುಕತೆ ನಡೆಯುತ್ತಿದೆ, ಶ್ರೀಘ್ರದಲ್ಲಿ ಬೀದರನಿಂದ ಹೊಸ
ವಿಮಾನಯಾನ ಸೇವೆಯೂ ಜನತೆಗೆ ಲಭ್ಯವಾಗಲಿದೆ ಎಂದು ಸಚಿವರು
ಜನತೆಗೆ ತಿಳಿಸಿದ್ದಾರೆ.
ಇದರ ಜೊತೆಗೆ ಬೇಸಿಗೆ ನಿಮಿತ್ಯ ಪ್ರಯಾಣಿಕರಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆಯಾಗಿದ್ದು,ಇಂದು ( ಮೇ 18)(ರೈಲು ಸಂಖ್ಯೆ 07187) ಮಧ್ಯಾಹ್ನ 3.50ಕ್ಕೆಕಾಚಿಗೂಡದಿಂದ ಹೊರಟು ಸಿಕಿಂದ್ರಾಬಾದ, ಬೆಗಂಪೇಟ, ವಿಕರಾಬಾದ,ಜಹೀರಾಬಾದ ಮಾರ್ಗವಾಗಿ ಸಾ. 7.25ಕ್ಕೆ ಬೀದರ, ರಾ. 8ಕ್ಕೆ ಭಾಲ್ಕಿಯಿಂದಉದಗೀರ, ಲಾತೂರ ರೋಡ ಮಾರ್ಗವಾಗಿ ನಗರಸೋಲ್‍ಗೆ ಮರುದಿನ ಮೇ. 19ರ ಬೆಳಿಗ್ಗೆ 7 ಗಂಟೆಗೆ
ತಲುಪಲಿದೆ.ಮತ್ತು ಅದೇ ದಿನ ರಾ. 8.00ಗಂಟೆಗೆ ನಗರಸೋಲ್ ನಿಂದ ಹೊರಟು ಬಂದ ಮಾರ್ಗವಾಗಿ ಮರುದಿನ ಮೇ.20 ರಂದು ಬೆ. 6.20ಕ್ಕೆ ಭಾಲ್ಕಿ ಬೆ. 7.00ಗಂಟೆಗೆ ಬೀದರ ತಲುಪಿ, ಬೆ. 11.35ಕ್ಕೆ ಕಾಚಿಗೂಡ ತಲಪಲಿದೆ. ಪ್ರಯುಕ್ತ ಕ್ಷೇತ್ರದ ಜನತೆಯ ವಿಮಾನಯಾನದಸಮಯ ಬದಲಾವಣೆಯ ಮತ್ತು ವಿಶೇಷ ರೈಲಿನ ಸದುಪಯೋUಪಡೆದುಕೊಳ್ಳಬೇಕೆಂದು ಜನತೆಯಲ್ಲಿ ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.