ಬೀದರ ಪೊಲೀಸ್ ಇಲಾಖೆಯಿಂದ ಮಿಂಚಿನ ಕಾರ್ಯಾಚರಣೆ:ಎಸ್.ಪಿ.ಚನ್ನಬಸವಣ್ಣ ಲಂಗೋಟಿ

ಬೀದರ,ಫೆ.26: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಬೀದರ ಜಿಲ್ಲೆಯ ಪೆÇಲೀಸ್ ಇಲಾಖೆಯೂ

ಅವಿರತ ಪ್ರಯತ್ನ ನಡೆಸಿದ್ದು, ಈಗಾಗಲೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ

ಹಲವು ಪ್ರಕರಣಗಳನ್ನು ಭೇದಿಸಿದ್ದಾರೆ ಎಂದು ಬೀದರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರ ಚನ್ನಬಸವಣ್ಣ ಲಂಗೊಟಿ ಹೇಳಿದರು.

ಅವರು ರವಿವಾರ ನಗರದ ಜಿಲ್ಲಾ ಪೆÇಲೀಸ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಸುದ್ಧಿಗೊಷ್ಠಿಯಲ್ಲಿ ಮಾತನಾಡಿದರು.

ಕಳೆದ ಎರಡು ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು, ಇದನ್ನು ಗಂಭೀರವಾಗಿ ಪರಿಗಣಿಸಿದ ಪೆÇಲೀಸ ಇಲಾಖೆಯೂ ಬೀದರ ಪೆÇೀಲಿಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ ಮತ್ತು ಹೆಚ್ಚುವರಿ ಪೆÇಲೀಸ ಆಧೀಕ್ಷಕ ಮಹೇಶ್ ಮೇಘಣ್ಣವರ ಮಾರ್ಗದರ್ಶನದಲ್ಲಿ ಬೀದರ ನಗರ ರೌಡಿ ನಿಗ್ರಹ ದಳದ ಅಧಿಕಾರಿ ಗಾಂಧಿ ಗಂಜ ಪೆÇಲೀಸ್ ಠಾಣೆಯ ನಿರೀಕ್ಷಕ ಹನುಮರೆಡ್ಡೆಪ್ಪ ಹಾಗೂ ಸಿಬ್ಬಂದಿಗಳಾದ ನವೀನ್, ಅನೀಲ್, ಎಮ್. ಡಿ. ಆರೀಫ್, ಇರ್ಫಾನ, ಗಂಗಾಧರ, ಪ್ರವೀಣ್, ಪ್ರಶಾಂತ, ಹರ್ಷವರ್ಧನರವನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆಯ ನಡೆಸಿ ಎರಡು ಬೈಕ್ ಕಳ್ಳತನ ಹಾಗೂ 7 ಸರಗಳ್ಳತನ ಸೇರಿ ಒಟ್ಟು 9 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಸುಮಾರು 11 ಲಕ್ಷ 70 ಸಾವಿರ ಮೌಲ್ಯದ ಚಿನ್ನಾಭರಣ, ಬೈಕ್ ಮತ್ತು ಕೃತ್ಯಕ್ಕೆ ಬಳಸಲಾದ ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದರು.

ಜೊತೆಗೆ ಕಳೆದ 24 ದಿನಗಳಲ್ಲಿ ಜೂಜು (24), ಮಟ್ಕಾ (38) ವೇಶ್ಯಾವಾಟಿಕೆ (04) ಅಬಕಾರಿ (08) ಎನ್.ಡಿ.ಪಿ.ಎಸ್. (01) ಹಾಗೂ ಈ.ಸಿ ಕಾಯ್ದೆಯ (02) ಪ್ರಕರಣ ಸೇರಿ ಒಟ್ಟು 77 ಪ್ರಕರಣಗಳನ್ನು ಸಹ ಬೀದರ ಪೆÇಲೀಸ್ ಇಲಾಖೆ ಭೇದಿಸಿ ಒಟ್ಟು 27,65,829 ರೂ. ಮೌಲ್ಯವು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಬೀದರ ಜಿಲ್ಲಾ ಪೆÇಲೀಸ ದಿನದ 24 ಗಂಟೆಯೂ ಜಿಲ್ಲೆಯ ಜನರ ಸೇವೆಗೆ ಬದ್ಧವಾಗಿದ್ದು ಇದರ ಮಧ್ಯೆಯೂ ಅಫರಾದ ನಡೆಯದಂತೆ ಜನರು ಜಾಗೃತಿ ವಹಿಸಬೇಕು ಅದಲ್ಲೂ ಮುಖ್ಯವಾಗಿ ಮಹಿಳೆಯರು ಜನನಿಬಿಡ ಹಾಗೂ ಜನ ವಿರಳವಾಗಿ ತಿರುಗಾಡುವ ಪ್ರದೇಶಗಳಲ್ಲಿ ಬಂಗಾರದ ಆಭರಣಗಳನ್ನು ಕಾಣುವ ಹಾಗೆ ಹಾಕಿಕೊಂಡು ಸಂಚರಿಸಬಾರದು ಹಾಗೂ ಸಾರ್ವಜನಿಕರು ಸ್ಥಳ ಬಿಟ್ಟು ಬೇರೆ ಊರಿಗೆ ಹೋಗುವಾಗ ಸ್ಥಳಿಯ ಪೆÇೀಲಿಸ್ ಠಾಣೆಗೆ ಮಾಹಿತಿ ತಿಳಿಸಬೇಕು ಹೀಗೆ ತಿಳಿಸಿದಲ್ಲಿ ಆ ಪ್ರದೇಶದಲ್ಲಿ ಪೆÇಲೀಸರ ಬಿಟ್ ಸಂಖ್ಯೆಯನ್ನು ಹೆಚ್ಚಿಸಿ ಅಫರಾದಕ್ಕೆ ಕಡಿವಾಣ ಹಾಕಬಹುದು ಜೊತೆಗೆ ನಿಮ್ಮ ಸೂತ್ತಮುತ್ತಲಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡುವುದು ಕಂಡುಬಂದಲ್ಲಿ ಪೆÇೀಲಿಸರಿಗೆ ಮಾಹಿತಿ ನೀಡಿ ಈ ಎಲ್ಲಾ ಮುಂಜಾಗೃತೆಯನ್ನು ವಹಿಸಿದ ಮೇಲು ಅಪರಾಧ ನಡೆದಲ್ಲಿ ತಕ್ಷಣ ಹತ್ತಿರ ಪೆÇಲೀಸ್ ಠಾಣೆ ಅಥವಾ ಪೆÇಲೀಸ ಸಾಹಾಯವಾಣಿ 112 ಗೆ ಕರೆ ಮಾಡಿ ಎಂದು ಅವರು ಸಲಹೆ ನೀಡಿ ಮುಂದೆಯೂ ಜಿಲ್ಲೆಯ ಶಾಂತಿಗೆ ಪೆÇೀಲಿಸ ಇಲಾಖೆ ಸದಾ ಕಾರ್ಯಪ್ರವೃತ್ತವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಾಂಧಿ ಗಂಜ ಪೆÇಲೀಸ್ ಠಾಣೆಯ ಸಿ.ಪಿ.ಐ ಹನುಮರೆಡ್ಡೆಪ್ಪ , ಪೆÇಲೀಸ್ ಇಲಾಖೆಯ ಸಿಬ್ಬಂದಿಗಳಾದ ನವೀನ್, ಅನೀಲ್, ಎಮ್. ಡಿ. ಆರೀಫ್, ಇರ್ಫಾನ, ಗಂಗಾಧರ, ಪ್ರವೀಣ್, ಪ್ರಶಾಂತ, ಹರ್ಷವರ್ಧನ ಸೇರಿದಂತೆ ಪೆÇಲೀಸ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.