ಬೀದರ ನಲ್ಲಿ ವೀರ್ ಬಾಲ್ ದಿವಸ ಆಚರಣೆ

ಬೀದರ:ಡಿ.30:ನಗರದ ಝಿರಾ ಫಂಕ್ಷನ್ ಹಾಲ್ ನಲ್ಲಿ ನಡೆದ ಪ್ರಧಾನ ಮಂತ್ರಿಗಳ ಕನಸಿನ ಕಾರ್ಯಕ್ರಮ ವೀರ ಬಾಲ್ ದಿವಸ ಅದ್ದೂರಿಯಾಗಿ ಜರುಗಿತು.

ನಾಂದೇಡ್ ನ ಗುರುದ್ವಾರದಿಂದ ಬಂದ ಸಿಂಗ್ ಸಾಹೇಬ್ ಔತರ್ ಸಿಂಗ್ ಶೀತಲ್ ಶ್ರೀ ಹಜೂರ್ ಶಾಹೇಬ್ ಅವರು ಗುರುಗೋವಿಂದ ಸಿಂಗ್ ಮತ್ತು ಅವರ ಪುತ್ರಾರಾದ ಬಾಬಾ ಜೋದವರ್ ಸಿಂಗ್, ಮತ್ತು ಬಾಬಾ ಫತೇ ಸಿಂಗ್ ಅವರ ಜೀವನ ಚರಿತೆ ಕುರಿತು ಸಂಪೂರ್ವಾಗಿ ವಿವರಿಸಿದರು,
ಈ ಸಂದರ್ಭದಲ್ಲಿ ಬಿಜೆಪಿ ಕಲ್ಬುರ್ಗಿ ವಿಭಾಗದ ಸಂಘಟಾನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಬಿನ್ನಾಡಿ, ಕಲ್ಬುರ್ಗಿ ವಿಭಾಗದ ಸಹ ಪ್ರಭಾರಿಗಳಾದ ಈಶ್ವರ್ ಸಿಂಗ್ ಠಾಕೂರ್, ಕಲ್ಬುರ್ಗಿ ವಿಭಾಗ ಸಹ ಸಂಘಟನಾ ಕಾರ್ಯದರ್ಶಿಗಳಾದ ಸೂರ್ಯಕಾಂತ್ ದೋಣಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ್ ಮಂಟಾಲ್ಕರ್, ಗುರುನಾನ ಶಿಕ್ಷಣ ಸಮೂಹದ ಅಧ್ಯಕ್ಷರಾದ ಬಲಬೀರ್ ಸಿಂಗ್, ಬೀದರ್ ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಶಶಿ ಹೊಸಹಳ್ಳಿ ಮತ್ತು ಪಕ್ಷದ ಪದಾಧಿಕಾರಿಗಳು ಮತ್ತು ಸಿಖ್ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.