ಬೀದರ ನಗರಸಭೆ ಪಾಲಿಕೆಯಾಗಿಸಲು ಕೇಂದ್ರ ಸಚಿವ ಖೂಬಾ ಮನವಿ

ಬೀದರ:ಜು.14:ಬೆಂಗಳೂರಿನಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ರಾಜ್ಯದ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹಿಮ್ ಖಾನ್ ರವರಿಗೆ ಭೇಟಿ ನೀಡಿ, ಬೀದರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಸಹಕರಿಸುವಂತೆ ಕೋರಿದರು.

ಬೀದರ ನಗರದ ಜನತೆಯ ಇಚ್ಛೆಯಂತೆ, ಬೀದರ ನಗರಸಭೆಯನ್ನು ನಮ್ಮ ಹಿಂದಿನ ಸರ್ಕಾರದ ಬಜೇಟನಲ್ಲಿ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಗತ್ಯ ಪ್ರಕ್ರಿಯೆಗಳು ಆಗುವುದು ಬಾಕಿ ಉಳಿದಿರುತ್ತದೆ, ಆದ್ದರಿಂದ ತಾವುಗಳು ಮುತುವರ್ಜಿವಹಿಸಿ, ಬೀದರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಶೀಘ್ರವಾಗಿ ಸರ್ಕಾರದ ಎಲ್ಲಾ ಪ್ರಕ್ರಿಯೆಗಳು ಮುಗಿಸಬೇಕೆಂದು ಮನವಿ ಪತ್ರ ನೀಡಿ ಕೋರಿಕೊಂಡರು.

ಈ ಸಂಧರ್ಭದಲ್ಲಿ ಬಸವಕಲ್ಯಾಣ ಶಾಸಕರಾದ ಶರಣು ಸಲಗಾರ, ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಹುಮನಾಬಾದ ಶಾಸಕರಾದ ಡಾ. ಸಿದ್ದು ಪಾಟೀಲ್, ಎನ್.ಎಸ್.ಎಸ್.ಕೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ, ಮಾಜಿ ಜಿ.ಪಂ. ಅಧ್ಯಕ್ಷರಾದ ಪದ್ಮಾಕರ ಪಾಟೀಲ್, ಹಾಗೂ ಬಸವರಾಜ ಆರ್ಯ ಮತ್ತು ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.