
ಬೀದರ:ಎ.10:ಏ. 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬೀದರ್ ನಗರದ ಗುದಗೆ ಆಸ್ಪತ್ರೆಯಲ್ಲಿ ಬೀದರ ಜಿಲ್ಲೆ ಸೇರಿದಂತೆ ನೆರೆ ರಾಜ್ಯ ತೆಲಂಗಾಣಾ ಹಾಗೂ ಮಹಾರಾಷ್ಟ್ರದ ನೂರಾರು ರೋಗಿಗಳು ಆಗಮಿಸಿ ಉಚಿತ ಮೂತ್ರ ಶಸ್ತ್ರ ಚಿಕಿತ್ಸೆ ಶಿಬಿರದ ಉಪಯೋಗವನ್ನು ಪಡೆದುಕೊಂಡರು.
ಖ್ಯಾತ ಮೂತ್ರ ಶಸ್ತ್ರ ತಜ್ಞರಾದ ಡಾಕ್ಟರ್ ನಾಗಭೂಷಣ್. ಎಂ ಅವರು ಬೆಂಗಳೂರಿಂದ ಆಗಮಿಸಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನಿಡುವುದರೊಂದಿಗೆ ಒಳ್ಳೆಯ ಸಲಹೆ ಸೂಚನೆಗಳು ನೀಡಿದ್ದರು. ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಚಂದ್ರಕಾಂತ್ ಗುದಗೆ ಹೆಸರಾಂತ ಹೃದಯ ತಜ್ಞರಾದ ಡಾ. ನಿತೀನ ಗುದಗೆ, ಡಾ.ಸಚಿನ ಗುದಗೆ,ಡಾ. ಮಹೇಶ ಸೇರಿದಂತೆ ಅನೇಕ ತಜ್ಞ ವೈದ್ಯರು ಉಪಸ್ಥಿತರಿದ್ದರು.
ಆಯುಷ್ಮಾನ್ ಭಾರತ ಯೋಜನೆ, ಯಶಸ್ವಿ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆ,ಎ ಬಿ ವೈ ಮತ್ತು ಇ ಎಸ್ ಐ ಯೋಜನೆ, ಖಾಸಗಿ ಆರೋಗ್ಯ ವಿಮಾ ಸೌಲಭ್ಯಗಳು ಲಭ್ಯವಿದ್ದ ಕಾರಣ ಎಲ್ಲಾ ಚಿಕಿತ್ಸೆಗಳು ರೋಗಿಗಳು ಉಚಿತವಾಗಿ ಪಡೆದರು. ಗುದಗೆ ಆಸ್ಪತ್ರೆಯ ಸಿಬ್ಬಂಧಿಗಳು ರೋಗಿಗಳಿಗೆ ವ್ಯವಸ್ಥಿತವಾಗಿ ಸೌಲಭ್ಯ ಮಾಡಿಕೊಟ್ಟಿದ್ದರು.