ಬೀದರ ದಕ್ಷಿಣದಲ್ಲಿ ಅತೀ ದೊಡ್ಡ ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆ

ಬೀದರ:ಜ.5:ದಿ.ಮಾಲತಿ ಖೇಣಿ ರವರ ಸ್ಮರಣೆಯ ನೆನಪಿನಲ್ಲಿ ಎಕೆಕೆ ಫೌಂಡೆಶನ್ ವತಿಯಿಂದ ಮಾಜಿ ಶಾಸಕರಾದ ಅಶೋಕ್ ಖೇಣಿ ರವರ ನೇತೃತ್ವದಲ್ಲಿ ಬೀದರ ದಕ್ಷಿಣದಲ್ಲಿ ಕ್ರಿಕೆಟ್ ಟೂರ್ನಾಮೆಂಟಿನ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೀನಾಕ್ಷೀ ಸಂಗ್ರಾಮ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಚಂದ್ರಶೇಖರ ಚನ್ನಶಟ್ಟಿ, ಕರೀಮ ಸಾಬ ಪೊಸ್ಟರ್, ಕರಪತ್ರ ಮತ್ತು ವಿಡಿಯೋ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಮೀನಾಕ್ಷೀ ಸಂಗ್ರಾಮ ಮಾತನಾಡಿ ಈ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಸಂತೋಷವಾಗಿದೆ ಮುಖ್ಯವಾಗಿ ಗ್ರಾಮೀಣ ಪ್ರತಿಭೆಗಳಿಗೆ ಈ ಟೂರ್ನಾಮೆಂಟ್ ಒಂದು ಉತ್ತಮ ವೇದಿಕೆಯಾಗಲಿದೆ. ಅಶೋಕ್ ಖೇಣಿಯವರು ಯಾವುದೇ ಕೆಲಸಗಳನ್ನು ಕೈಗೊಂಡರು ಅದರಲ್ಲಿ ಬೀದರ ದಕ್ಷಿಣದ ಅಭಿವೃದ್ಧಿಯ ಪರವಾಗಿರಲಿದೇ ಎಂಬುವದಕ್ಕೆ ಈ ಟೂರ್ನಾಮೆಂಟ್ ಆಯೋಜನೆ ಒಂದು ಉತ್ತಮ ಉದಾಹರಣೆ. ಈ ಕ್ರಿಡಾ ಕೂಟದಲ್ಲಿ ಬೀದರ ದಕ್ಷಿಣದವರಿಗೆ ಮಾತ್ರ ಆದ್ಯಾತೆ ನೀಡಲಾಗಿದೆ ಮತ್ತು ಪ್ರತಿ ಗ್ರಾಮದಿಂದ ಒಂದರಿಂದ ಎರಡು ತಂಡಗಳಿಗೆ ಅವಾಕಾಶ ನೀಡಿ ಕಾರ್ಯಕರ್ತರ ಸಮಕ್ಷಮದಲ್ಲಿ ಪಂದ್ಯವಳಿಗಳು ಆಯೋಜಿಸುವದರಿಂದ ಆಯಾ ಗ್ರಾಮದ ಯುವಕರಿಗೆ ಉತ್ತಮ ವೇದಿಕೆಯಾಗಲಿದೆ. ಮೊದಲನೇ ಬಹುಮಾನ 2 ಲಕ್ಷ ದ್ವೀತಿಯ ಬಹುಮಾನ 1 ಲಕ್ಷ ಹಾಗೂ ತೃತೀಯ ಬಹುಮಾನ 50 ಸಾವಿರ ವಿದ್ದು ಬೀದರ ದಕ್ಷಿಣ ಕ್ಷೇತ್ರದಲ್ಲಿ ಇದ್ದು ಒಂದು ಅತೀ ದೊಡ್ಡ ಮೋತ್ತದ ಕ್ರಿಕೆಟ್ ಟೂರ್ನಾಮೆಂಟ್ ವಾಗಿರುತ್ತದೆ ಎಂದು ವೇದಿಕೆಯ ಮೂಖಾಂತರ ತಿಳಿಸಿರುತ್ತಾರೆ. ವಿಶೇಷವಾಗಿ ಕಾರ್ಯಕ್ರಮದ ಉದ್ಘಾಟನೆಯನ್ನು 9 ಜನವರಿ 2023 ರಂದು ಬೇಳಗ್ಗೆ 11:00 ಗಂಟೆಗೆ ಖ್ಯಾತ ನಟ ಹ್ಯಾಟ್ರೀಕ್ ಹಿರೋ ಡಾ|| ಶಿವರಾಜಕುಮಾರ ರವರು ಪಶು ವೈದ್ಯಾಕೀಯ ಕ್ರಿಕೆಟ್ ಕ್ರಿಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ.

ಭಾಗವಹಿಸಲು ಇಚ್ಛಿಸುವ ತಂಡಗಳು ಆಯಾ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಅಥವಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸಂಪರ್ಕಿಸಬಹುದು ಹಾಗೂ ಅಶೋಕ್ ಖೇಣಿ ಯವರ ಕಛೇರಿಗೆ ಭೇಟಿ ನೀಡಿ ನೋಂದಾಯಿಸಲು ಕೋರಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ಕಿಸಾಸ್ ಸೇಲ್ ಕಾರ್ಯದರ್ಶಿಯಾದ ಉದಯಕುಮಾರ್, ಜಿಲ್ಲಾ ಲೇಬರ್ ಸೇಲ್ ಅಧ್ಯಕ್ಷರಾದ ರಮೇಶ, ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ, ರಾಜಕುಮಾರ ಮಡಿಕಿ, ರಾಜು ಪಾಟೀಲ್, ಮೋಗಲಪ್ಪಾ, ಪರಮೇಶ್ವರ ಪಾಟೀಲ್, ರಜಾಕ, ನರಸಿಂಗ್ ಸಾಮ್ರಾಟ್, ಸಾಮಸನ್, ಮೋಹಿನ್ ಪಟನ್, ಜೈಕುಮಾರ ಇತರ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.